ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ; ಕಾಮುಕನಿಗೆ ಬಿತ್ತು ಧರ್ಮದೇಟು…

76
firstsuddi

ಚಿತ್ರದುರ್ಗ : ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸ್ಥಳೀಯರು ಥಳಿಸಿರುವ ಘಟನೆ ಜಿಲ್ಲೆಯ ಹಿರಿಯೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಶಿರಾ ಮೂಲದ ತಿಪ್ಪಯ್ಯ(42) ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಕಳೆದ ಒಂದು ತಿಂಗಳಿಂದ ಜಿಲ್ಲೆಯ ಹಿರಿಯೂರು ಪಟ್ಟಣದ ಶುಗರ್ ಫ್ಯಾಕ್ಟರಿಯ ಕಾರ್ಮಿಕರಿಗಾಗಿ ನಿರ್ಮಿಸಿರುವ ಮನೆಗಳ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ತಿಪ್ಪಯ್ಯ 8 ವರ್ಷದ ಅಪ್ರಾಪ್ತ ಬಾಲಕಿಗೆ ಚಾಕ್ಲೇಟ್ ಆಮಿಷವೊಡ್ಡಿ ಕರೆದೊಯ್ದು, ಬಾಲಕಿಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಗಾಬರಿಗೊಂಡು ಜೋರಾಗಿ ಕಿರುಚಿದ್ದಾಳೆ. ಬಾಲಕಿ ಕಿರುಚುತ್ತಿರುವ ಶಬ್ಧ ಕೇಳಿದ ಅಲ್ಲಿನ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿ ತಿಪ್ಪಯ್ಯಗೆ ಭರ್ಜರಿ ಗೂಸ ಕೊಟ್ಟಿದ್ದಾರೆ.

ಈ ವೇಳೆ ಆರೋಪಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಲು ಮುಂದಾದ ಸಾರ್ವಜನಿಕರ ಪ್ರಯತ್ನ ಗಮನಿಸಿದ ಆರೋಪಿ ಅಲ್ಲಿಂದ ಅನಾರೋಗ್ಯದ ನಾಟಕವಾಡಿ ಎಸ್ಕೇಪ್ ಆಗಿದ್ದಾನೆ. ಆರೋಪಿಗೆ ಸ್ಥಳೀಯರು ಧರ್ಮದೇಟು ನೀಡಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.