ಹಾವೇರಿ : ಸಾರಿಗೆ ಬಸ್ ಹರಿದು ಅಂಗನವಾಡಿ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ನಿಟ್ಟೂರು ಗ್ರಾಮದ ಬಳಿ ಇಂದು ಬೆಳಗ್ಗೆ ಘಟನೆ ನಡೆದಿದ್ದು, ಕಮಲಮ್ಮ ಕಾಸಂಬಿ(55) ಮೃತ ಶಿಕ್ಷಕಿ.
ಕಮಲಮ್ಮ ತನ್ನ ಮಗನೊಂದಿಗೆ ಬೈಕ್ ನಲ್ಲಿ ರಾಣಿಬೆನ್ನೂರು ನಗರಕ್ಕೆ ಬರುತ್ತಿದ್ದರು. ಈ ವೇಳೆ ಎದುರಿಗೆ ಸಾರಿಗೆ ಬಸ್ ಬಂದಿದ್ದು, ಬಸ್ ನಿಂದ ತಪ್ಪಿಸಿಕೊಳ್ಳಲು ಹೋದ ವೇಳೆ ನಿಯಂತ್ರಣ ತಪ್ಪಿ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಮಲಮ್ಮಳ ತಲೆಯ ಮೇಲೆ ಬಸ್ ಬಸ್ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಕಮಲಮ್ಮಳ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










