ಬೆಂಗಳೂರಿನ ಮನೆಯೊಂದರಲ್ಲಿ ಮಧ್ಯರಾತ್ರಿ ನಿಗೂಢ ಸ್ಫೋಟ – ಇಬ್ಬರು ಗಂಭೀರ…

70
firstsuddi

ಬೆಂಗಳೂರು : ವಿಜಯನಗರದ ಹಂಪಿನನಗರ ಮನೆಯೊಂದರಲ್ಲಿ ನಿಗೂಢ ಸ್ಫೋಟವೊಂದು ಸಂಭವಿಸಿದೆ. ಎರಡಂತಸ್ತಿನ ಕಟ್ಟಡದ ಮೊದಲನೇ ಮಹಡಿ ಮನೆಯಲ್ಲಿ ಘಟನೆ ನಡೆದಿದ್ದು, ಈ ವೇಳೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಮಧ್ಯರಾತ್ರಿ 12.45 ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಅಕ್ಕಪಕ್ಕದ ಮನೆಯವರು ಬೆಚ್ಚಿಬಿದ್ದಿದ್ದಾರೆ.

ಘಟನೆಯಲ್ಲಿ ಸೂರ್ಯ ನಾರಾಯಣಶೆಟ್ಟಿ (74), ಪುಷ್ಪಾವತಮ್ಮ (70) ಎಂಬ ವೃದ್ಧ ದಂಪತಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಾರದ ಹಿಂದೆ ಹೊಸ ಫ್ರಿಡ್ಜ್ ಅನ್ನು ಮನೆಗೆ ತರಲಾಗಿತ್ತು. ಮನೆಯ ಮುಖ್ಯ ದ್ವಾರದ ಬಳಿ ನಿಲ್ಲಿಸಲಾಗಿದ್ದ ಫ್ರಿಡ್ಜ್ ಸಂಪೂರ್ಣ ಬ್ಲಾಸ್ಟ್ ಆಗಿದೆ. ಹಾಗೂ ಅಕ್ಕಪಕ್ಕದ ಮನೆಗಳ ಗಾಜು ಪುಡಿ ಪಡಿಯಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ.

ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ನಿಂದ ಸ್ಫೋಟ ಸಂಭವಿಸರಬಹುದು ಎಂಬ ಶಂಕೆ ಮೂಡಿತ್ತು. ಆದರೆ ಗ್ಯಾಸ್ ಸಿಲಿಂಡರ್ ನಿಂದ ಸ್ಫೋಟ ಸಂಭವಿಸಿಲ್ಲ. ಸ್ಫೋಟಕ್ಕೆ ನಿಜವಾದ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ವೇಳೆಗೆ, ಸ್ಥಳೀಯರೇ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.