ಬಾಲ್ಯ ವಿವಾಹ ತಪ್ಪಿಸಿ, ಉನ್ನತ ಶಿಕ್ಷಣ ಕೊಡಿಸಿ ಎಂದು ಅಧಿಕಾರಿಗಳಿಗೆ ಬಾಲಕಿ ಪತ್ರ…

184
firstsuddi

ಮೈಸೂರು : ಬಾಲ್ಯ ವಿವಾಹ ತಪ್ಪಿಸಿ, ಶಿಕ್ಷಣ ಕೊಡಿಸಿ ಎಂದು ಹಾಸನ ಮೂಲದ ಬಾಲಕಿಯೊಬ್ಬಳು ಅಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ. ನನಗೆ ತಂದೆ, ತಾಯಿ ಇಲ್ಲದ ಕಾರಣ ಮನೆಯಲ್ಲಿ ನನ್ನ ಸಂಬಂಧಿಕರು ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾನು ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದೇನೆ. ನನಗೆ ಉನ್ನತ ಶಿಕ್ಷಣ ಕೊಡಿಸಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾಳೆ.

ಸದ್ಯ ಮನೆ ಬಿಟ್ಟು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಸ್ನೇಹಿತರ ಮನೆಯಲ್ಲಿ ಬಾಲಕಿ ಉಳಿದುಕೊಂಡಿದ್ದಾಳೆ. ಈ ಮಧ್ಯೆ ಪಿರಿಯಾಪಟ್ಟಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಪರ್ಕಿಸಿ, ಪತ್ರ ನೀಡಿದ್ದಾಳೆ. ಅಧಿಕಾರಿಗಳು ಬಾಲಕಿಗೆ ಇದೀಗ ಬಾಲಮಂದಿರಲ್ಲಿ ಆಶ್ರಯ ಕೊಡಲು ಮುಂದಾಗಿದ್ದಾರೆ.