ರಸ್ತೆ ಬದಿ ನಿಂತಿದ್ದ ಲಾರಿಗೆ ಪೊಲೀಸ್ ವಾಹನ ಡಿಕ್ಕಿ…

117
firstsuddi

ಯಾದಗಿರಿ : ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಜಿಲ್ಲೆಯ ಸುರಪುರ ಉಪ ವಿಭಾಗದ ಡಿವೈಎಸ್ ಪಿ ವೆಂಕಟೇಶ್ ಉಗಿಬಂಡಿಯವರ ಸರ್ಕಾರಿ ವಾಹನ ಡಿಕ್ಕಿ ಹೊಡೆದಿದೆ.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಅದೃಷ್ಟವಶತ್ ಡಿವೈಎಸ್ ಪಿ ವೆಂಕಟೇಶ್ ಉಗಿಬಂಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಘಟನೆ ವೇಳೆ ಡಿವೈಎಸ್ ಪಿ ಸೇರಿ ಉಪ ಕಾನ್ಸ್ ಟೇಬಲ್ ಉಮಾಕಾಂತ್ ಹಾಗೂ ವಾಹನ ಚಾಲಕ ಚಂದಪ್ಪಗೌಡಗೆ ತೀವ್ರ ಒಳಪೆಟ್ಟುಗಳಾಗಿದ್ದು, ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾರೀ ಮಳೆ ಹಿನ್ನೆಲೆ ರಸ್ತೆ ಸರಿಯಾಗಿ ಕಾಣದ  ಹಿನ್ನಲೆ ಈ ಅಪಘಾತ ಸಂಭವಿಸಿದ್ದು, ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.