ಭಾರತದಲ್ಲಿರುವ ವಿದೇಶಿ ಪ್ರಜೆಗಳ ವೀಸಾ ಅವಧಿ ವಿಸ್ತರಣೆ…

62
firstsuddi

ನವದೆಹಲಿ : ಭಾರತದಲ್ಲಿರುವ ವಿದೇಶಿ ಪ್ರಜೆಗಳ ವೀಸಾ ಅವಧಿಯನ್ನು ಸೆಪ್ಟೆಂಬರ್. 30ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ನಿನ್ನೆ ಘೋಷಿಸಿದೆ.  ಕೊವಿಡ್ -19 ಹಿನ್ನೆಲೆಯಲ್ಲಿ ವಿಮಾನಗಳ ಮೇಲೆ ನಿರ್ಬಂಧ ಹೇರಿರುವುದರಿಂದ ಮಾರ್ಚ್ 2020ರಲ್ಲಿ ವಿವಿಧ ರೀತಿಯ ವೀಸಾ ಮೂಲಕ ಭಾರತಕ್ಕೆ ಬಂದ ಹಲವಾರು ವಿದೇಶಿಗರು ಭಾರತದಲ್ಲಿಯೇ ಸಿಲುಕಿಕೊಂಡಿದ್ದರಿಂದ ವೀಸಾವನ್ನು ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 30ರವರೆಗೂ ವೀಸಾ ವಿಸ್ತರಣೆಗಾಗಿ ಸಂಬಂಧಿಸಿದ ಎಫ್ ಆರ್ ಆರ್ ಒ / ಎಫ್ ಆರ್ ಒ ಅರ್ಜಿಯನ್ನು ವಿದೇಶಿಗರು ಸಲ್ಲಿಸುವ ಅಗತ್ಯವಿಲ್ಲ. ಆದರೆ ನಿರ್ಗಮಿಸುವ ಮೊದಲು ಇ-ಎಫ್ ಆರ್ ಆರ್ ಒ ಪೋರ್ಟಲ್ ನಲ್ಲಿ ನಿರ್ಗಮನ ಅನುಮತಿಗಾಗಿ ಆನ್ ಲೈನ್ ನಲ್ಲಿ ಅರ್ಜಿಸಲ್ಲಿಸಬೇಕಾಗುತ್ತದೆ. ಇದಕ್ಕೆ ಹೆಚ್ಚು ಶುಲ್ಕವನ್ನು ವಿಧಿಸದೇ ಉಚಿತವಾಗಿ ಆಧಾರದ ಮೇಲೆ ಸಂಬಂಧಿಸಿದ ಎಫ್ಆರ್ ಆರ್ ಒ / ಎಫ್ ಆರ್ ಒ ಅರ್ಜಿಯನ್ನು ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಇನ್ನೂ ಈಗಾಗಲೇ ಭಾರತದಲ್ಲಿರುವ ಅಫ್ಘಾನಿಸ್ತಾನ ಪ್ರಜೆಗಳಿಗೆ ಪ್ರತ್ಯೇಕವಾಗಿ ನೀಡಲಾಗಿರುವ ಮಾರ್ಗ ಸೂಚಿಗಳ ಅಡಿಯಲ್ಲಿ ವೀಸಾ ವಿಸ್ತರಣೆಯನ್ನು ನೀಡಲಾಗುವುದು ಎಂದು ತಿಳಿಸಿದೆ.