ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಪದವೀಧರೆಗೆ ಉದ್ಯೋಗ ಕಲ್ಪಿಸಿಕೊಟ್ಟ ಸಚಿವರು…

77
firstsuddi

ಹೈದರಾಬಾದ್ : ಉನ್ನತ ಶಿಕ್ಷಣ ಪಡೆದು ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆಗೆ ಉದ್ಯೋಗ ನೀಡಿ ತೆಲಂಗಾಣದ ಪೌರಾಡಳಿತ ಸಚಿವ ಕೆ.ಟಿ. ರಾಮರಾವ್ ಅವರು ಮಾನವೀಯತೆ ಮೆರೆದಿದ್ದಾರೆ.

ಎಂಎಸ್ ಸಿ ಮಾಡಿದ ಎ.ರಜನಿ, ಜಿಎಚ್ ಎಂಸಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ತೆಲುಗಿನ ದಿನಪತ್ರಿಕೆಯೊಂದರಲ್ಲಿ ಮಹಿಳೆ ಬಗ್ಗೆ ವರದಿ ಪ್ರಕಟಗೊಂಡ ಬಳಿಕ ಸಚಿವರು, ಆಕೆಗೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್(ಜೆಎಚ್ಎಂಸಿ)ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಹಾಯಕ ಕೀಟಶಾಸ್ತ್ರಜ್ಞರ ಕೆಲಸ ನೀಡಿದ್ದಾರೆ.

ವರಂಗಲ್ ಜಿಲ್ಲೆಯ ಕೃಷಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ ರಜನಿ ಕಷ್ಟಪಟ್ಟು ತನ್ನ ವಿದ್ಯಾಭ್ಯಾಸವನ್ನು ಉತ್ತಮವಾಗಿ ಮುಗಿಸಿದಳು. ಎಂಎಸ್ ಸಿಯನ್ನು ಸಾವಯವ ರಸಾಯನಶಾಸ್ತ್ರ ವಿಭಾಗದಲ್ಲಿ ಪೂರ್ಣಗೊಳಿಸಿದ್ದಾರೆ. 2013ರಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ, ಆಕೆ ಹೈದರಾಬಾದ್ನ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪಿಎಚ್ ಡಿಗೆ ಅರ್ಹತೆ ಪಡೆದಿದ್ದರು. ಅದೇ ಸಂದರ್ಭದಲ್ಲಿ ವಕೀಲರೊಬ್ಬರ ಜೊತೆ ವಿವಾಹವಾದ ರಜನಿ ಪತಿ ಜತೆಗೆ ಹೈದರಾಬಾದ್ಗೆ ಆಗಮಿಸಿದ್ದರು.

ಈ ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದಾರೆ. ರಜನಿ ಕುಟುಂಬವನ್ನು ನೋಡಿಕೊಳ್ಳುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ಅವರ ಗಂಡನಿಗೆ ಹೃದಯಾಘಾತ ಸಂಭವಿಸಿ ಕೆಲಸ ಮಾಡದ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಈ ಸಂದರ್ಭದಲ್ಲಿ ರಜನಿ ತನ್ನ ಇಬ್ಬರು ಹೆಣ್ಣು ಮಕ್ಕಳು, ಚಿಕ್ಕಮ್ಮ ಮತ್ತು ಗಂಡನನ್ನು ನೋಡಿಕೊಳ್ಳಲು ಅವಳು ಕೆಲಸ ಹುಡುಕಲು ಆರಂಭಿಸಿದರು. ನಂತರ ಕುಟುಂಬವನ್ನು ನಡೆಸಲು ಆಕೆಯ ಅತ್ತೆ ಸೇರಿದಂತೆ ಐವರು ತರಕಾರಿ ಮಾರಾಟ ಮಾಡಲು ಆರಂಭಿಸಿದರು. ಕೊನೆಗೆ ಗುತ್ತಿಗೆ ನೈರ್ಮಲ್ಯ ಕೆಲಸಗಾರನಾಗಿ ಜಿಎಚ್ ಎಂಸಿಗೆ ಸೇರಿಕೊಂಡು ತಿಂಗಳಿಗೆ 10,000ರೂ, ಸಂಬಳ ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.