ಮಂಗಳೂರು : ಬೆಂಗಳೂರಿನಲ್ಲಿ ಏಳು ಮಂದಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಾಲ್ವರು ಮಕ್ಕಳು ನಗರದಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಮೂವರು ಮಕ್ಕಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದರು.
21 ವರ್ಷದ ಯುವತಿ ಸೇರಿದಂತೆ ನಾಲ್ವರು ಇಂದು ನಗರದ ಅತ್ತಾವರದಲ್ಲಿ ಪತ್ತೆಯಾಗಿದ್ದಾರೆ. ಅಮೃತವರ್ಷಿಣಿ (21), ರಾಯನ್ ಸಿದ್ಧಾಂತ (12), ಭೂಮಿ (12) ಮತ್ತು ಚಿಂತನ್ (12) ಪತ್ತೆಯಾಗಿರುವ ಮಕ್ಕಳು. ಇವರು ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಒಂದೇ ಅಪಾರ್ಟ್ ಮೆಂಟ್ ನಿವಾಸಿಗಳು.
ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಈ ನಾಲ್ವರು ರೈಲಿನ ಮೂಲಕ ಮಂಗಳೂರಿಗೆ ತಲುಪಿದ್ದಾರೆ. ರೈಲು ನಿಲ್ದಾಣ ಸುತ್ತಮುತ್ತ ತಿರುಗಾಟುತ್ತಿದ್ದವರನ್ನು ನೋಡಿ ಅನುಮಾಗೊಂಡ ಆಟೋ ಚಾಲಕ ನಂತರ ಆಟೋದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ. ಸದ್ಯ ನಾಲ್ವರು ಮಕ್ಕಳು ಸುರಕ್ಷಿತವಾಗಿದ್ದು, ಈ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.










