ಕಾರವಾರ : ಸಾಂಬಾರ್ ಸರಿಯಾಗಿ ಮಾಡಿಲ್ಲವೆಂದು ಕುಡಿದ ಮತ್ತಿನಲ್ಲಿ ತಾಯಿ ಹಾಗೂ ತಂಗಿಗೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ಗ್ರಾಮದ ಕುಡಗೋಡು ಬಳಿ ನಡೆದಿದೆ.
ಪಾರ್ವತಿ ನಾರಾಯಣ ಹಸ್ಲರ್ (42), ರಮ್ಯಾ ನಾರಾಯಣ ಹಸ್ಲರ್(19) ಮೃತ ದುರ್ದೈವಿಗಳು. ಮಂಜುನಾಥ್ ಜಯಂತ್ ನಾರಾಯಣ ಹಸ್ಲರ್(24) ಕೊಲೆಗೈದ ಆರೋಪಿ. ಕಳೆದ ರಾತ್ರಿ ಸಾಂಬಾರ್ ಸರಿಯಾಗಿಲ್ಲವೆಂದು ಜಗಳ ತೆಗೆದಿದ್ದಾನೆ. ಈ ವೇಳೆ ರೊಚ್ಚಿಗೆದ್ದ ಮಂಜುನಾಥ್ ಮನೆಯಲ್ಲಿದ್ದ ನಾಡ ಬಂದೂಕಿನಿಂದ ಗುಂಡು ಹಾರಿಸಿ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ್ದಾನೆ.
ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.










