ಜೈಲುವಾಸ ಅನುಭವಿಸುತ್ತಿರುವ ಆರ್ಯನ್ ಗೆ ಮನಿ ಆರ್ಡರ್ ಕಳುಹಿಸಿದ ಶಾರುಖ್ ಖಾನ್.

72
firstsuddi

ಮುಂಬೈ : ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಿದ ಆರೋಪದಲ್ಲಿ ಎನ್ ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ 4,500 ರೂ. ಮನಿ ಆರ್ಡರ್ ಕಳುಹಿಸಲಾಗಿದೆ.

ಆರ್ಯನ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿ ಆದೇಶವನ್ನು ಅಕ್ಟೋಬರ್ 20ಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ, ಆರ್ಯನ್ ಮತ್ತೊಂದು ವಾರ ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿಯೇ ಉಳಿಯಬೇಕಾಗಿದೆ. ಇದೀಗ ಆರ್ಯನ್ ಗೆ ಖೈದಿ ಸಂಖ್ಯೆ ಎನ್ 956 ಎಂದು ನಿಗದಿಪಡಿಸಲಾಗಿದೆ. ಜೈಲಿನಲ್ಲಿ ತನ್ನಿಷ್ಟದ ಆಹಾರ ಹಾಗೂ ಇತರೆ ವಸ್ತು ಖರೀದಿ ಮಾಡಲು 4,500 ರೂ. ಮನಿ ಆರ್ಡರ್ ಮಾಡಲಾಗಿದೆ. ಜೈಲಿನ ನಿಯಮದಂತೆ ಓರ್ವ ವ್ಯಕ್ತಿ ತಿಂಗಳಿಗೆ ಗರಿಷ್ಠ 4,500 ರೂಗಳನ್ನು ಮಾತ್ರ ಮನಿ ಆರ್ಡರ್ ಆಗಿ ಪಡೆಯಲು ಅವಕಾಶವಿದೆ.

ಮುಂಬೈ ಕ್ರೂಸ್ ಹಡಗು ಮೇಲೆ ರೇವ್ ಪಾರ್ಟಿ ನಡೆಸಿದ ಆರೋಪ ಹಿನ್ನೆಲೆ ಆರ್ಯನ್ ಖಾನ್ ಸೇರಿ ಇತರರನ್ನು ಕಳೆದ ಅ. 2ರಂದು ಎನ್ ಸಿಬಿ ಬಂಧಿಸಿತ್ತು.