ಕಾಲುವೆಗೆ ಉರುಳಿ ಬಿದ್ದ ಕಾರು – ನಾಲ್ವರ ದುರ್ಮರಣ…

68
firstsuddi

ಬಾಗಲಕೋಟೆ : ಕಾಲುವೆಗೆ ಕಾರು ಉರುಳಿ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಲೋಕಾಪುರ ಪಟ್ಟಣದ ಹಲಕಿ ಕ್ರಾಸ್ ಬಳಿ ನಿನ್ನೆ ತಡರಾತ್ರಿ ಸಂಭವಿಸಿದೆ.

ಬಡಕಿ ಗ್ರಾಮದ ನಿವಾಸಿ ಕಾರು ಚಾಲಕ ಸುನಿಲ್ (24), ಗುಡಮ್ಮನಾಳ ಗ್ರಾಮದವರಾದ ಮಹಾದೇವ್ ಪಾಟೀಲ್ (27), ವಿಜಯ್ (26) ಮತ್ತು ಎರಿತಾತಾ ಕಂಬಾರ್ (26) ಮೃತರು ಎಂದು ಗುರುತಿಸಲಾಗಿದೆ.

ಜಮಖಂಡಿಯಿಂದ ರಾಮದುರ್ಗದ ಕಡೆಗೆ ಕಾರಿನಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು. ಆಗ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಕಾಲುವೆಗೆ ಪಲ್ಟಿಯಾಗಿ ಬಿದ್ದಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟರೆ, ಇನ್ನಿಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕ್ರೇನ್ ಸಹಾಯದಿಂದ ಕಾರು ಸಹಿತ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ಸ್ಥಳಕ್ಕೆ ಲೋಕಾಪೂರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.