ಅನ್ಯಕೋಮಿನ ಯುವತಿಯನ್ನ ಪ್ರೀತಿಸುತ್ತಿದ್ದ ಯುವಕ ನಾಪತ್ತೆ – ಭೀಮಾತೀರದಲ್ಲಿ ನಡೀತಾ ಮರ್ಯಾದಾ ಹತ್ಯೆ?

67
firstsuddi

ವಿಜಯಪುರ : ಅನ್ಯಕೋಮಿನ ಯುವತಿಯನ್ನ ಪ್ರೀತಿಸುತ್ತಿದ್ದ ಯುವಕನೋರ್ವ ನಾಪತ್ತೆಯಾಗಿದ್ದು, ಪ್ರೇಯಸಿಯ ಕಣ್ಣೇದುರೇ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಇದು ಮರ್ಯಾದಾ ಹತ್ಯೆ ಎನ್ನುವ ಆರೋಪ ಕೇಳಿಬಂದಿದೆ.

ಜಿಲ್ಲೆಯ ಆಲಮೇಲ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಳಗಾನೂರ ಗ್ರಾಮದ ರವಿ ನಿಂಬರಗಿ (32) ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿಯ ಪೋಷಕರು ಇದಕ್ಕೊಪ್ಪದೆ ರವಿಯನ್ನು ಯುವತಿಯ ಕಡೆಯ 8 ಜನರು ಕರೆದುಕೊಂಡು ಬಂದು ಆಕೆಯ ಎದುರೇ ಕೊಲೆಗೈದು ಶವವನ್ನು ಬಿಡದೇ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ರವಿ ನಿಂಬರಗಿಯ ಕುಟುಂಬಸ್ಥರು ತಮ್ಮ ಮಗ ಕಾಣಿಯಾಗಿದ್ದಾನೆ ಎಂದು ಆಲಮೇಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಯುವತಿ ಪೋಷಕರು ನಾಪತ್ತೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಲಮೇಲ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.