ಹುಬ್ಬಳ್ಳಿ : ನಮಗೆ ಬಿಜೆಪಿ ಮೇಲೆ ಸಾಫ್ಟ್ ಕಾರ್ನರ್ ಇದ್ದಿದ್ದರೆ ಕಾಂಗ್ರೆಸ್ ಜೊತೆ ಸರ್ಕಾರ ಯಾಕೆ ಮಾಡುತ್ತಿದ್ದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ , ಸಿದ್ದರಾಮಯ್ಯ ಅವರಿಗೆ ಅದನ್ನು ಬಿಟ್ಟು ಬೇರೆ ಏನು ಹೇಳಲಿಕ್ಕೆ ಸಾಧ್ಯ? ನಮಗೆ ಯಾವುದೇ ಕಾರಣಕ್ಕೂ ಯಾರ ಬಗ್ಗೆ ಕೂಡ ಸಾಫ್ಟ್ ಕಾರ್ನರ್ ಇಲ್ಲ, ನಮಗೆ ಬಿಜೆಪಿ ಮೇಲೆ ಸಾಫ್ಟ್ ಕಾರ್ನರ್ ಇದ್ದಿದ್ದರೆ ಕಾಂಗ್ರೆಸ್ ಜೊತೆ ಸರ್ಕಾರ ಯಾಕೆ ಮಾಡುತ್ತಿದ್ದೆ. ಬಿಜೆಪಿ ಜೊತೆ 5 ವರ್ಷ ಸರ್ಕಾರ ಮಾಡಿದ್ದೆ, 2006ರಲ್ಲಿ ಸರ್ಕಾರ ಮಾಡಲು ಇದೇ ಸಿದ್ದರಾಮಯ್ಯ ಕಾರಣ. ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ನಲ್ಲಿ ಸಮಸ್ಯೆ ಇಲ್ಲಾ ಅಂತ ಅವರ ಭಾವನೆ ಇರಬಹುದು, ನಾನು ಅವರಿಗೆ ಮನವಿ ಮಾಡುತ್ತೇನೆ, ಸಿದ್ದರಾಮಯ್ಯ ನಿಮ್ಮ ವರ್ಚಸ್ಸು ಹಾಗೂ ರಾಜಕೀಯ ಶಕ್ತಿ ಕುಂದಿಸಿಕೊಳ್ಳಬೇಡಿ ಎಂದರು.
ಇನ್ನೂ ಸಿಂದಗಿಯಲ್ಲಿ ಕಳೆದ 5 ದಿನಗಳಿಂದ ಪ್ರಚಾರ ನಡೆಸಿದ್ದು, ಈ ಬಾರಿ ಚುನಾವಣೆ ಗೆಲ್ಲುತ್ತೇವೆ. ದೇವೆಗೌಡರ ಕಾಲದ ಹಾಗೂ ನನ್ನ ಕಾಲದ ನೀರಾವರಿ ಯೋಜನೆಗಳು ರೈತರ ಸಾಲ ಮನ್ನಾ ಬಗ್ಗೆ ಹಳ್ಳಿಗಳಲ್ಲಿ ಜನ ಸ್ಪಂದಿಸಿ ಮಾತನಾಡುತ್ತಿದ್ದಾರೆ ಎಂದರು. ಇದೇ ವೇಳೆ ಸಿಎಂ ಉದಾಸಿ ಬಿಜೆಪಿಗೆ ಹೋದ ನಂತರ ನಮಗೆ ಹಾನಗಲ್ ನಲ್ಲಿ ನಾಯಕತ್ವದ ಕೊರತೆ ಇತ್ತು. ಈ ಬಾರಿ ನಾವು ಹಾನಗಲ್ ನಲ್ಲಿ ಮೊದಲೇ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ, ಅಲ್ಲಿಯ ಸ್ಥಿತಿ ನೋಡಿ ನಾನು ಮಾತನಾಡುತ್ತೇನೆ ಎಂದರು.










