ಕೊಟ್ಟಿಗೆಹಾರ : ಬಣಕಲ್ ಗ್ರಾ.ಪಂ.ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ 2.72ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಬಣಕಲ್‍ನಲ್ಲಿ ಇಂದು ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಚರ್ಚ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಣಕಲ್ ಗ್ರಾ.ಪಂ. ಕೆಳ್ಳಳ್ಳಿ, ಚಕ್ಕೋಡು, ಮತ್ತಿಕಟ್ಟೆ, ದೊಡ್ಡನಂದಿ, ಚಕ್ಕೋಡು, ಸಬ್ಲಿ, ಕೆಂಬಲ್ ಮಠ, ಹೆಗ್ಗುಡ್ಲು, ಹೆಗ್ಗಡ್ಲು ಜಟಿಗೇಶ್ವರ, ಗುಡ್ಡೆಟ್ಟಿ, ಇಂದಿರಾನಗರ ರಸ್ತೆಗಳ ಅಭಿವೃದ್ದಿ, ಡಿಜಿಟಲ್ ಗ್ರಂಥಾಲಯ, ದಾಸರಹಳ್ಳಿ ಸಮುದಾಯ ಭವನ, ಬಣಕಲ್ ಅಂಬೇಡ್ಕರ್ ಭವನ, ಸುಭಾಷನಗರ ಪ್ಲಡ್ ಲೈಟ್ ಆಟದ ಮೈದಾನ, ದೇವಸ್ಥಾನ, ಮಸೀದಿ, ಚರ್ಚುಗಳ ಪುನರುಜ್ಜೀವನಕ್ಕೆ ಅನುದಾನ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ ಮತ್ತು ಪಂಗಡಗಳ ರಸ್ತೆ ಮತ್ತು ಚರಂಡಿ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗಿದೆ. ಮಳೆ ನಿಂತ ಕೂಡಲೇ ಕಾಮಗಾರಿ ಆರಂಭಿಸಿ ಮುಗಿಸಲು ಪ್ರಯತ್ನಿಸಲಾಗುವುದು. ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ವಿಸ್ತರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಮಾತನಾಡಿ, ದೇಶದ ರಸ್ತೆ ಅಭಿವೃದ್ದಿಗಾಗಿ ಕೇಂದ್ರ ಸರಕಾರ ನೂರು ಕೋಟಿ ಅನುಧಾನ ಬಿಡುಗಡೆ ಮಾಡಿದೆ. ಗ್ರಾಮಾಭಿವೃದ್ದಿಗೆ ಸಾರ್ವಜನಿಕರ ಸಹಕಾರ ತುಂಬಾ ಅಗತ್ಯ. ಪ್ರತಿಯೋರ್ವ ಗ್ರಾ.ಪಂ. ಸದಸ್ಯ ಸಾಮಾನ್ಯ ಕಟ್ಟ ಕಡೆಯ ಮನುಷ್ಯನ ಸಂಪರ್ಕವನ್ನು, ಸಂಬಂಧವನ್ನು ಇಟ್ಟುಕೊಳ್ಳುವ ವ್ಯಕ್ತಿಯಾಗಿದ್ದಾರೆ. ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ಜವಾಬ್ದಾರಿಯುತ ಕೆಲಸ ಮಾಡುವುದರ ಮೂಲಕ ಗ್ರಾಮಾಭಿವೃದ್ಧಿಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಇಕ್ಲಾಸ್ ಅಹ್ಮದ್ ಸೇರಿದಂತೆ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಮಾಜ ಸೇವಕ ಆರೀಪ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬಿಜೆಪಿ ಮುಖಂಡ ಬಿ.ಎಂ.ಭರತ್, ತಾ.ಪಂ.ಇಒ ಡಿ.ಡಿ.ಪ್ರಕಾಶ್, ಪಿಡಿಒ ಬಿ.ಎನ್.ಕೃಷ್ಣಪ್ಪ, ಜಿ.ಪಂ.ಮಾಜಿ ಸದಸ್ಯ ಶಾಮಣ್ಣ, ಗ್ರಾ.ಪಂ. ಅಧ್ಯಕ್ಷ ಜಿ.ಸತೀಶ್‍ಮತ್ತಿಕಟ್ಟೆ, ಉಪಾಧ್ಯಕ್ಷೆ ಟಿ.ಎಲ್.ಲಕ್ಷ್ಮಿ, ಸದಸ್ಯರಾದ ಬಿ.ವಿ.ಸುರೇಶ್, ಬಿ,ಸಿ.ಅನಿಲ್ ಕುಮಾರ್, ಇರ್ಪಾನ್, ರಾಮಚಂದ್ರ, ಬಿ.ಕೆ.ಸುರೇಶ್, ದಿಲ್‍ದಾರ್ ಬೇಗಂ, ಮಯೂರ, ಭಾರತಿ, ವಿದ್ಯಾ, ಪ್ರಶಾಂತಿ, ಸುಜಾತ, ಪ್ರಮೀಳ, ಸಹಕಾರ ಸಂಘದ ಅಧ್ಯಕ್ಷ ಎ.ಆರ್.ಅಭಿಲಾಷ್, ಉಪಾಧ್ಯಕ್ಷ ರಮೇಶ್, ಪ.ಪಂ.ಮಾಜಿ ಅಧ್ಯಕ್ಷ ಅನೂಕುಮಾರ್, ಸ್ಥಳೀಯರಾದ ಬಿ.ಕೆ ಪ್ರಥ್ವಿ, ಬಿ.ಎಸ್.ವಿಕ್ರಂ, ಶಿವರಾಮಶೆಟ್ಟಿ, ಟಿ.ಎಂ.ಗಜೇಂದ್ರ, ಮಾಜಿ ಯೋಧರಾದ ದಿನೇಶ್, ಗಿರಿಯಪ್ಪ, ಯತೀಶ್, ಕಾಂಗ್ರೆಸ್‍ನ ಟಿ.ಎಂ.ಸುಬ್ರಮಣ್ಯ, ದೇವರಾಜ್, ಚಂದ್ರಯ್ಯ, ಮಂಜಯ್ಯ, ರುದ್ರಯ್ಯ, ಚಂದ್ರಯ್ಯ ಯಶೋಧಮ್ಮ ಇದ್ದರು.










