ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ – ಒಂದೇ ಕುಟುಂಬದ ನಾಲ್ವರು ಸಾವು…

93
firstsuddi

ನವದೆಹಲಿ : ದೆಹಲಿಯ ಓಲ್ಡ್ ಸೀಮಾಪುರಿ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂರು ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯಲ್ಲಿ ಬೆಳಗ್ಗೆ 4 ಗಂಟೆಗೆ ಘಟನೆ ಸಂಭವಿಸಿದ್ದು, ಮೃತರನ್ನು ಹರಿಲಾಲ್, ಅವರ ಪತ್ನಿ ರೀನಾ, ಪುತ್ರ ಆಶು ಹಾಗೂ ಪುತ್ರಿ ರೋಹಿಣಿ ಎಂದು ಗುರುತಿಸಲಾಗಿದೆ. ಹರಿಲಾಲ್ ಮತ್ತು ರೀನಾ ದಂಪತಿ ಮತ್ತೊಬ್ಬ ಪುತ್ರ ಅಕ್ಷಯ್ ಅಪಾಯದಿಂದ ಪಾರಾಗಿದ್ದಾನೆ.

ಮನೆಗೆ ಬೆಂಕಿ ಬಿದ್ದ ವಿಚಾರವನ್ನು ಮುಂಜಾನೆ 4.07ರ ಸಮಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ತಿಳಿಸಲಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಉಸಿರುಗಟ್ಟುವಿಕೆಯಿಂದಾಗಿ ಮೃತಪಟ್ಟಿದ್ದಾರೆ. ಬೆಂಕಿಗೆ ಸುಟ್ಟು ಕರಕಲಾಗಿದ್ದ ನಾಲ್ಕು ಮೃತದೇಹಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.