ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 266 ರೂ. ಏರಿಕೆ..!

71
firstsuddi

ನವದೆಹಲಿ : ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 266 ರೂಪಾಯಿ ಏರಿಕೆಯಾಗಿದ್ದು, ತೈಲ ಕಂಪನಿಗಳು ಜನರಿಗೆ ಶಾಕ್ ನೀಡಿವೆ.

ಇಂದಿನಿಂದಲೇ ಈ ಹೊಸ ದರವು ಜಾರಿಗೆ ಬಂದಿದೆ. ನಿನ್ನೆ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 1734 ರೂ. ಇದ್ದರೆ, ಇಂದು 2,000.50 ರೂ.ಗೆ ಏರಿಕೆಯಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ನ ದರದಲ್ಲಿ ಯಾವುದೇ ಏರಿಕೆ ಕಂಡಿಲ್ಲ.

ಮುಂಬೈನಲ್ಲಿ ಪ್ರತಿ ಸಿಲಿಂಡರ್ ದರ 1,950 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್  ಬೆಲೆ ಈಗ 2,073.50 ರೂ. ಮತ್ತು ಚೆನ್ನೈನಲ್ಲಿ ಸಿಲಿಂಡರ್ ಬೆಲೆ 2,133 ರೂ.ಗೆ ಏರಿಕೆಯಾಗಿದೆ.