ಸಕಲೇಶಪುರ : ಪುರಸಭೆ ವಾಣಿಜ್ಯ ಮಳಿಗೆಯ ಮುಂಭಾಗದಲ್ಲಿ ಇಂದು ಆಟೋ ಮಾಲೀಕರುಗಳು ಮತ್ತು ಕಲಾವಿದರ ಸಂಘದಿಂದ ಸರಳವಾಗಿ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ಅದ್ದೂರಿ ರಾಜ್ಯೋತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿತ್ತು, ಆದರೆ ಕರ್ನಾಟಕ ರತ್ನ ಕನ್ನಡಿಗರ ಕಣ್ಮಣಿ ಕರ್ನಾಟಕದ ಕುವರ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಡಾಕ್ಟರ್. ರಾಜ್ ಕುಮಾರ್ ರವರ ಪುತ್ರ ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ಮರಣದಿಂದ ಕೋಟ್ಯಾಂತರ ಅಭಿಮಾನಿಗಳು ದುಂಖ: ತೃಪ್ತ ರಾಗಿರುವುದರಿಂದ ಈ ಬಾರಿ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಹಾಗೂ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಯುವ ಜನತಾದಳದ ಅಧ್ಯಕ್ಷರಾದ ಸ. ಬ . ಭಾಸ್ಕರ್ ರವರು, ಸುನೀಲ್ ಜೈನ್ ರವರು ,ವಕೀಲರಾದ ಎಸ್. ವಿ. ಷಣ್ಮುಖರವರು ಮತ್ತುವಕೀಲರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ರವಿಕುಮಾರ್ ರವರು, ಹಿರಿಯ ಬಿಜೆಪಿ ಧುರೀಣರಾದ ಆಳ್ವಾರವರು . ಮತ್ತು ರಾಜ್ಯದ ಹೆಸರಾಂತ ಸಕಲೇಶಪುರ ಬೀಟ್ಸ್ ಆರ್ಕೆಸ್ಟ್ರಾ ತಂಡದ ಸದಸ್ಯರಾದ ಮುನ್ನಾ ಮತ್ತು ಜ್ಯೂನಿಯರ್ ರವಿಚಂದ್ರನ್ ಸಂಗಡಿಗರು ಸರಳ ರಾಜ್ಯೋತ್ಸವವನ್ನು ಆಚರಿಸುವುದರ ಮೂಲಕ ಸಕಲೇಶಪುರದ ಜನತೆಯ ಮನಸ್ಸನ್ನು ಗೆದ್ದರು. ನಂತರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.










