ರಾಹುಲ್ ಗಾಂಧಿಗೆ ತಿಳುವಳಿಕೆ ಇಲ್ಲ, ಸಿದ್ದರಾಮಯ್ಯ, ಡಿಕೆಶಿ ನೀವಾದ್ರೂ ಪ್ರಬುದ್ಧರಾಗಿ ಮಾತಾಡಿ : ಪ್ರಹ್ಲಾದ್ ಜೋಶಿ.

89
firstsuddi

ಧಾರವಾಡ : ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದವರು, ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೀವು ಪ್ರಬುದ್ಧರಾಗಿ ಮಾತನಾಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಲಹೆ ನೀಡಿದರು.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಜನ ಹಿತ ಏನು ಹಾಗೂ ಜನ ಎಲ್ಲಿ ಹೋಗಿ ವೋಟು ಹಾಕಿದ್ರು ಅಂತಾ ಗೊತ್ತಿಲ್ಲ. ದೇಶದಲ್ಲಿ 29 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಅದರಲ್ಲಿ ಎನ್‍ಡಿಎ ಮೈತ್ರಿ ಕೂಟ 12 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನ ಎರಡು ಕಡೆ ಗೆದ್ದಿದ್ದು ಬಿಟ್ಟರೆ ಸಮಗ್ರ ಪಾಲು ಇಲ್ಲ. ನಾವು ತೆಲಂಗಾಣ, ಕರ್ನಾಟಕ, ಉತ್ತರ ಈಶಾನ್ಯದಲ್ಲಿ ಗೆದ್ದಿದ್ದೇವೆ. ಮಧ್ಯಪ್ರದೇಶ ಹಾಗೂ ಹಿಂದಿನ ಚುನಾವಣೆಯಲ್ಲಿ ಯುಪಿಯಲ್ಲಿ ಕೂಡಾ ಗೆದ್ದಿದ್ದೇವೆ. ಆಗಲೂ ಸಹಿತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಲ್ಲಿತ್ತು ಎಂದರು.

ತೆರಿಗೆ ಕಡಿಮೆ ಮಾಡಿ ನಾವು ಪೆಟ್ರೋಲ್ ಹಾಗೂ ಡೀಸೆಲ್ ಕೊಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲಿ ಒಂದು ಪೈಸೆ ದರ ಕಡಿಮೆಯಾಗಿಲ್ಲ. ಮನೆಯಲ್ಲಿ ತಿಳುವಳಿಕೆ ಇಲ್ಲದವರಿಗೆ ಸ್ವಲ್ಪ ವಿನಾಯ್ತಿ ನೀಡಬಹುದು. ಆದರೆ ನೀವು ರಾಹುಲ್ ರೀತಿ ಅಲ್ಲ, ಸ್ವಲ್ಪ ಪ್ರಬುದ್ಧರಾಗಿ ಮಾತನಾಡಿ. ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲಿ ತೈಲ ದರ ರಾಹುಲ್ ಗಾಂಧಿಗೆ ಕೇಳಿ ಕಡಿಮೆ ಮಾಡ್ತಿರಾ ಎಂದು ಡಿಕೆಶಿಗೆ ಪ್ರಶ್ನೆ ಮಾಡಿದ ಜೋಶಿ, ನಾವು ಅಲ್ಪ ಸಂಖ್ಯಾತರ, ಬಹುಸಂಖ್ಯಾತರ ಪರ ಅಲ್ಲ. ನಾವು ತುಷ್ಟಿಕರಣ ರಾಜಕಾರಣ ಮಾಡಲ್ಲ. ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿ ಅವರು ತುಷ್ಟಿಕರಣ ಮಾಡುತ್ತಿದ್ದಾರೆ ಎಂದರು.

ಉಪಚುನಾವಣೆ ಸಮಯದಲ್ಲಿ ಸರ್ಕಾರ ಹಾಗೂ ಮಂತ್ರಿಗಳು ಅಭ್ಯರ್ಥಿಗಳ ಪರ ನಿಲ್ಲುವುದು ಸಹಜ. ಗುಂಡ್ಲುಪೇಟೆ ಚುನಾವಣೆ ವೇಳೆ ಸಿದ್ಧರಾಮಯ್ಯ ಅಲ್ಲೇ ಟೆಂಟ್ ಹೊಡೆಡಿದ್ರು. ಎರಡೂ ಕ್ಷೇತ್ರಗಳ ಒಟ್ಟು ಮತಗಳ ಸರಾಸರಿ ನೋಡಿದರೆ 53 ರಷ್ಟು ಮತ ಬಿಜೆಪಿಗೆ ಬಿದ್ದಿವೆ. ಡಿಪಾಸಿಟ್ ಕಳೆದುಕೊಂಡಿದ್ದರೆ ರೂಟ್ ಔಟ್, ನಮಗೂ 76 ಸಾವಿರ ವೋಟು ಹಾಕಿದ್ದಾರೆ. ಹಾನಗಲ್ನಲ್ಲಿ ಅವರಿಗೆ 4 ಸಾವಿರ ಹೆಚ್ಚು ಬಿದ್ದಿವೆ. ಸಿಂದಗಿಯಲ್ಲಿ ಅವರ ಸ್ಥಿತಿ ಏನಾಗಿದೆ, 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ. ಸಿದ್ದರಾಮಯ್ಯ ಅಲ್ಲೇ ಟೆಂಟ್ ಹೊಡೆದಿದ್ರು. ಒಂದು ಗೆದ್ದ ನಂತರ ನಾವು ಬೀಗಬಾರದು ಸೋತ ನಂತರ ಧೃತಿಗೆಡಬಾರದು ಎಂದು ಜೋಶಿ ಹೇಳಿದರು.