ತಾಜ್‍ಮಹಲ್ ರೀತಿಯೇ ಮನೆ ನಿರ್ಮಿಸಿ ಪ್ರೀತಿಯ ಪತ್ನಿಗೆ ಉಡುಗೊರೆ ನೀಡಿದ ಪತಿ…

108
firstsuddi

ಭೋಪಾಲ್ : ಷಹಜಹಾನ್ ಮುಮ್ತಾಜ್ ನಿಧನದ ನಂತರ ಪತ್ನಿಯ ಮೇಲಿನ ಪ್ರೀತಿಯ ಸಂಕೇತವಾಗಿ ಆಗ್ರಾದಲ್ಲಿ ತಾಜ್​ಮಹಲ್ ಕಟ್ಟಿಸಿ ಉಡುಗೊರೆಯಾಗಿ ನೀಡಿದ್ದ. ಅದೇ ರೀತಿ ಮಧ್ಯಪ್ರದೇಶದ ಬುರ್ಹಾನ್ ಪುರದಲ್ಲಿ ವ್ಯಕ್ತಿಯೊಬ್ಬರು ಪತ್ನಿ ಮೇಲಿನ ಪ್ರೀತಿಗೆ ತಾಜ್​ಮಹಲ್ ರೀತಿಯ ಮನೆಯನ್ನು ಕಟ್ಟಿಸಿ ಗಿಫ್ಟ್ ನೀಡಿದ್ದಾರೆ.

ಮಧ್ಯಪ್ರದೇಶದ ಬುರ್ಹಾನ್​ಪುರ ಜಿಲ್ಲೆಯ ಆನಂದ್ ಪ್ರಕಾಶ್ ಚೌಕ್ಸೆ ತನ್ನ ಪತ್ನಿ ಮಂಜುಷಾ ಚೌಕ್ಸೆ ಗೆ ಬೆಲೆಬಾಳುವ ಮನೆಯನ್ನು ನಿರ್ಮಿಸಿ ಉಡುಗೊರೆಯಾಗಿ ನೀಡಿದ್ದಾರೆ. ಈ ಮನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸುಮಾರು 3 ವರ್ಷಗಳ ಅವಧಿಯಲ್ಲಿ ಈ ಮನೆ ಕಾಮಗಾರಿ ಪೂರ್ಣಗೊಂಡಿದ್ದು, ಎರಡು ಮಹಡಿಗಳನ್ನು ಹೊಂದಿದೆ. ಮನೆಯ ನೆಲವನ್ನು ರಾಜಸ್ಥಾನದ ಮಕ್ರಾನಾದಿಂದ ಮಾಡಲಾಗಿದ್ದು, ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ. ಕೆಳಮಹಡಿಯಲ್ಲಿ ಎರಡು ಬೆಡ್ ರೂಮ್ ಮತ್ತು ಮೇಲಿನ ಮಹಡಿಯಲ್ಲಿ ಎರಡು ಬೆಡ್ ರೂಮ್‍ಗಳಿವೆ. ಅಲ್ಲದೇ ಗ್ರಂಥಾಲಯ ಹಾಗೂ ಧ್ಯಾನದ ಕೊಠಡಿಗಳೂ ಈ ಮನೆಯಲ್ಲಿವೆ. ಈ ಮನೆಯ ಮೇಲಿರುವ ಗುಮ್ಮಟ 29 ಅಡಿ ಎತ್ತರವಿದ್ದು, ಇದು ತಾಜ್ ಮಹಲ್ ರೀತಿಯೇ ಗೋಪುರ ಹೊಂದಿದೆ.