ಸಿಂಹದ ಆವರಣದೊಳಗೆ ಪ್ರವೇಶಿಸಿದ ಯುವಕ – ಮೃಗಾಲಯದ ಸಿಬ್ಬಂದಿಯಿಂದ ರಕ್ಷಣೆ…

88
firstsuddi

ಹೈದರಾಬಾದ್, ತೆಲಂಗಾಣ : ಯುವಕನೊಬ್ಬ ಹೈದರಾಬಾದ್ ನ ನೆಹರೂ ಝೂವಲಾಜಿಕಲ್ ಪಾರ್ಕ್ ನಲ್ಲಿ ಸಿಂಹದ ಆವರಣದೊಳಗೆ ಪ್ರವೇಶಿಸಿ ಕೆಲಕಾಲ ಆತಂಕ ಸೃಷ್ಟಿಸಿದ್ದಾನೆ.

31 ವರ್ಷದ ಸಾಯಿಕುಮಾರ್ ಸಿಂಹದ ಆವರಣದಲ್ಲಿದ್ದ ಬಂಡೆಗಳ ಮೇಲೆ ತೆರಳಿದ್ದಾನೆ. ಬಂಡೆಯ ಮೇಲೆ ವ್ಯಕ್ತಿ ಕುಳಿತಿದ್ದರೆ ಕೆಳಗಿನಿಂದ ದೈತ್ಯ ಸಿಂಹವೊಂದು ಆತನನ್ನೇ ನೋಡುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮೃಗಾಲಯ ಸಿಬ್ಬಂದಿ ಸಾಯಿಕುಮಾರ್ ನನ್ನು ರಕ್ಷಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ತನಿಖೆ ಕೈಗೊಂಡಿದ್ದು, ಪ್ರಾಥಮಿಕ ತನಿಖೆ ಪ್ರಕಾರ ಸಾಯಿಕುಮಾರ್ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ. ಈ ಭಯಾನಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.