ಬಿಜೆಪಿ ಸಂಸದ ಗೌತಮ್ ಗಂಭಿರ್ ಗೆ ಜೀವ ಬೆದರಿಕೆ…

67
firstsuddi

ನವದೆಹಲಿ : ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಗೆ  ಇ-ಮೇಲ್ ಮೂಲಕ ಜೀವ ಬೆದರಿಕೆ ಬಂದಿದ್ದು, ಈ ಸಂಬಂಧ ಗೌತಮ್ ಗಂಭೀರ್ ದೆಹಲಿಯ ರಾಜೇಂದ್ರ ನಗರ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಡಿಸಿಪಿಗೆ ದೂರು ನೀಡಿದ್ದಾರೆ.

ಗೌತಮ್ ಗಂಭಿರ್ ಗೆ ಇ-ಮೇಲ್ ಮೂಲಕ ಐಸಿಸ್ ಕಾಶ್ಮೀರದಿಂದ ಕೊಲೆ ಬೆದರಿಕೆಗಳು ಬಂದಿವೆ. ತನಿಖೆ ನಡೆಯುತ್ತಿದೆ. ಅವರ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಡಿಸಿಪಿ ಶ್ವೇತಾ ಚೌಹಾಣ್ ತಿಳಿಸಿದ್ದಾರೆ.