ಓಮಿಕ್ರಾನ್ ಭೀತಿ : ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ…

61
firstsuddi

ನವದೆಹಲಿ : ದೇಶದಲ್ಲಿ ಕೊರೊನಾ ಎರಡನೇ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಮೂರನೇ ಅಲೆ ಇಲ್ಲ ಅಂದುಕೊಂಡಿದ್ದ ಜನತೆಗೆ ಇದೀಗ ಕೊರೊನಾ ಹೊಸ ರೂಪಾಂತರ ತಳಿ ಓಮಿಕ್ರಾನ್ ಆತಂಕ ಸೃಷ್ಟಿಸಿದೆ. ಈಗಾಗಲೇ ಓಮಿಕ್ರಾನ್ ರೂಪಾಂತರಿ ವೈರಸ್ ನಿಧಾನವಾಗಿ ಅನೇಕ ದೇಶಗಳಲ್ಲಿ ಕಾಣಿಸಿಕೊಂಡು ತನ್ನ ಅಬ್ಬರವನ್ನ ಶುರು ಮಾಡಿಕೊಳ್ಳುತ್ತಿದೆ. ಈಗ ಭಾರತವೂ ಹೈ ಅಲರ್ಟ್ ಆಗಿದ್ದು, ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಡಿಸೆಂಬರ್ 1 ರಿಂದ ಈ ಮಾರ್ಗಸೂಚಿಗಳು ಜಾರಿಗೆ ಬರಲಿವೆ.

ಹೊಸ ಮಾರ್ಗಸೂಚಿಗಳು ಇಂತಿವೆ:
• ಈಗಾಗಲೇ ಓಮಿಕ್ರಾನ್ ಪತ್ತೆಯಾಗಿರುವ ದೇಶಗಳಿಂದ ಬರುವ 5% ಪ್ರಯಾಣಿಕರಿಗೆ ಆರ್ ಟಿಪಿಸಿಆರ್ ರ‍್ಯಾಂಡಮ್ ಟೆಸ್ಟ್ ಗೆ ಒಳಪಡಿಸಬೇಕು, ಈ ಪೈಕಿ ಯಾರಿಗಾದರೂ ವರದಿ ಪಾಸಿಟಿವ್ ಇದ್ದಲ್ಲಿ ಜಿನೋಮಿಕ್ ಟೆಸ್ಟ್ ಗೆ ಕಳುಹಿಸಿ ಕೊರೊನಾ ನಿಯಮ ಪಾಲಿಸಬೇಕು.
• ಪ್ರಯಾಣ ಬೆಳೆಸುವ ಮೊದಲು 72 ಗಂಟೆಗಳ ಒಳಗೆ ಪರೀಕ್ಷೆ ಮಾಡಿಸಿಕೊಂಡ ಆರ್ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶವನ್ನು ಏರ್ ಸುವಿಧಾ ಪೋರ್ಟಲ್ ಗೆ ಅಪ್ಲೋಡ್ ಮಾಡಬೇಕು.
• ವರದಿ ನೆಗೆಟಿವ್ ಬಂದರೂ ಸಹ ಅವರನ್ನು ಏಳು ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತದೆ. ಅವರು ಎಂಟು ದಿನಗಳ ನಂತರ ಮತ್ತೆ ಪರೀಕ್ಷೆಗೊಳಗಾಗಬೇಕು. ಆಗ ಮತ್ತೆ ನೆಗೆಟಿವ್ ಬಂದ ಮೇಲೂ ಮುಂದಿನ ಏಳು ದಿನಗಳವರೆಗೆ ತಮ್ಮ ಮೇಲೆ ನಿಗಾ ಇರಿಸಿಕೊಳ್ಳಬೇಕು.