ನವದೆಹಲಿ : ಟ್ವೀಟರ್ನ ನೂತನ ಸಿಇಒ ಆಗಿ ಭಾರತೀಯ ಮೂಲದ ಪರಾಗ್ ಅಗರ್ ವಾಲ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಕಂಪನಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನು ಮುಂದೆ, ಅನುಮತಿ ಇಲ್ಲದೆ ಖಾಸಗಿ ವ್ಯಕ್ತಿಗಳ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ಗೌಪ್ಯತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ವ್ಯಕ್ತಿಗಳ ಸಮ್ಮತಿಯಿಲ್ಲದೆ ಅವರ ಫೋಟೋ ಅಥವಾ ವೀಡಿಯೊಗಳಂತಹ ಖಾಸಗಿ ವಿಚಾರವನ್ನು ಹಂಚಿಕೊಳ್ಳಲು ನಾವು ಅನುಮತಿಸುವುದಿಲ್ಲ. ಈ ನೀತಿಯ ಅಡಿಯಲ್ಲಿ ಜನರ ಖಾಸಗಿ ಮಾಹಿತಿಯನ್ನು ಪ್ರಕಟಿಸುವುದನ್ನೂ ಸಹ ನಿಷೇಧಿಸಲಾಗಿದೆ ಎಂದು ಟ್ವೀಟರ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ.










