ಇಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್.

76
firstsuddi

ನವದೆಹಲಿ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂದು ಭಾರತಕ್ಕೆ ಆಗಮಿಸಿಲಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಮತ್ತು ಪುಟಿನ್ ಮುಖಾಮುಖಿ ಭೇಟಿಯಾಗುತ್ತಿದ್ದು, 21ನೇ ಇಂಡೋ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳಲಿದ್ದಾರೆ.

ಈ ವೇಳೆ ವ್ಯಾಪಾರ, ಇಂಧನ, ಸಾಂಸ್ಕøತಿಕ, ಭದ್ರತೆ, ಬಾಹ್ಯಾಕಾಶ ತಂತ್ರಜ್ಞಾನದ ಮಾತುಕತೆ ನಡೆಯಲಿದೆ. ಇದರ ಜೊತೆಗೆ ಎಕೆ.200 ರೈಫಲ್ ಉತ್ಪಾದನೆ ಸಂಬಂಧ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧವಾಗಿವೆ.

ಇನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ರಷ್ಯಾದ ಸಹವರ್ತಿ ಲಾವ್ರೋವ್ ಜತೆ ಮಾತುಕತೆ ನಡೆಸಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾದ ರಕ್ಷಣಾ ಸಚಿವ ಶೋಯ್ಗು ಅವರೊಂದಿಗೆ, ಭಾರತ-ರಷ್ಯಾ ಅಂತರ್-ಸರ್ಕಾರಿ ಆಯೋಗದ ಮಿಲಿಟರಿ-ತಾಂತ್ರಿಕ ಸಹಕಾರದ ಚೌಕಟ್ಟಿನ ಅಡಿಯಲ್ಲಿ ಮಾತುಕತೆ ನಡೆಸುವರು. ಅದಾದ ಬಳಿಕ ಬೆಳಗ್ಗೆ 11.30ಕ್ಕೆ ಎರಡೂ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಸೇರಿ 2+2 ಸಂವಾದ ನಡೆಸುವರು.