900ಕ್ಕೂ ಹೆಚ್ಚು ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿದ ಸಿಇಒ!

69
firstsuddi

ನ್ಯೂಯಾರ್ಕ್ : ನ್ಯೂಯಾರ್ಕ್ ಮೂಲದ ಬೆಟರ್.ಕಾಮ್ ನ ಸಿಇಒ ವಿಶಾಲ್ ಗಾರ್ಗ್ ಅವರು ತಮ್ಮ ಕಂಪನಿಯ ಸುಮಾರು 900ಕ್ಕೂ ಹೆಚ್ಚು ಉದ್ಯೋಗಿಗಳನ್ನು(ಶೇ.9 ರಷ್ಟು ಕಾರ್ಮಿಕ ಶಕ್ತಿ) ಜೂಮ್ ಮೀಟಿಂಗ್ ಕರೆದು ವಜಾಗೊಳಿಸಿದ್ದಾರೆ.

ವರದಿಗಳ ಪ್ರಕಾರ, ಯುಎಸ್ ಮತ್ತು ಭಾರತದಲ್ಲಿನ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಿಇಒ ಮೂರು ನಿಮಿಷಗಳ ಜೂಮ್ ಮೀಟಿಂಗ್ ಸಮಯದಲ್ಲಿ ಹಠಾತ್ತನೆ ವಜಾ ಮಾಡಿದ್ದಾರೆ. ಮಾರುಕಟ್ಟೆಯ ದಕ್ಷತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯಲ್ಲಿ ಬದಲಾವಣೆಯಿಂದ ಅವರನ್ನು ವಜಾಗೊಳಿಸಲಾಗಿದೆ ಎಂದು ಭಾರತೀಯ-ಅಮೆರಿಕನ್ ಸಿಇಒ ಹೇಳಿದರು.

ವಿಶಾಲ್ ಗಾರ್ಗ್ ಅವರು ಜೂಮ್ ಮೀಟಿಂಗ್ ನಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ನಾನು ಇಂದು ನಿಮಗೆ ಒಳ್ಳೆಯ ಸುದ್ದಿಯನ್ನು ಹೇಳಲು ಬಂದಿಲ್ಲ. ಇದು ನೀವು ಕೇಳಲು ಬಯಸುವ ಸುದ್ದಿಯಲ್ಲ. ಆದರೆ ಕೊನೆಯದಾಗಿ ಇದು ನನ್ನ ನಿರ್ಧಾರವಾಗಿತ್ತು. ನೀವು ಅದನ್ನು ನನ್ನಿಂದಲ್ಲೇ ಕೇಳಬೇಕೆಂದು ನಾನು ಬಯಸುತ್ತೇನೆ. ಹಿಂದೆ ಈ ರೀತಿ ನಾನು ಮಾಡಿದ್ದಕ್ಕೆ ನಾನು ಅತ್ತಿದ್ದೆ. ಈ ಬಾರಿ ನನಗೆ ಸ್ವಲ್ಪ ಧೈರ್ಯವಿದೆ ಎಂದು ನಾನು ಭಾವಿಸುತ್ತೇನೆ. ಇಂದು ದುರದೃಷ್ಟಕರವಾಗಿ ನೀವು ಈ ಗುಂಪಿನ ಭಾಗವಾಗಿದ್ದೀರಿ. ಇಲ್ಲಿಗೆ ನಿಮ್ಮ ಉದ್ಯೋಗವನ್ನು ತಕ್ಷಣವೇ ಕೊನೆಗೊಳಿಸಲಾಗಿದೆ ಎಂದು ಶಾಕಿಂಗ್ ಹೇಳಿಕೆಯನ್ನು ನೀಡಿದರು.

ಈ ವೀಡಿಯೋ ಕಾಲ್ ಅನ್ನು ಉದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೋವನ್ನು ನೋಡಿದ ನೆಟ್ಟಿಗರು ಶಾಕ್ ಆಗಿ, ಕಮೆಂಟ್ ಮಾಡುತ್ತಿದ್ದಾರೆ.