ಬೆಂಗಳೂರು : ಪತಿಯ ಕಿರುಕುಳಕ್ಕೆ ಬೇಸತ್ತು ಪತ್ಮಿ ನೇಣಿಗೆ ಶರಣಾಗಿರುವ ಘಟನೆ ನಗರದ ಅಮೃತಹಳ್ಳಿಯಲ್ಲಿ ನಡೆದಿದೆ.
ವೀರಣ್ಣ ಪಾಳ್ಯದ ನಿವಾಸಿ ಸಂಗೀತಾ(26) ನೇಣಿಗೆ ಶರಣಾದ ಮಹಿಳೆ. ಮಂಡ್ಯ ಮೂಲದ ಸಂಗೀತಾ ನೆಲಮಂಗಲ ಮೂಲದ ವಿನಯ್ ನನ್ನು ನಾಲ್ಕು ವರ್ಷ ಪ್ರೀತಿಸಿ (ಒಂದೂವರೆ ವರ್ಷದ ಹಿಂದೆ) ಮದುವೆಯಾಗಿದ್ದರು. ದಂಪತಿ ಇಬ್ಬರೂ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಮಗುವಾಗಿಲ್ಲ ಎಂಬ ವಿಚಾರವಾಗಿ ಗಂಡ ವಿನಯ್ ಕಿರುಕುಳ ನೀಡುತ್ತಿದ್ದ ಎಂದು ಡೆತ್ ನೋಟ್ ಬರೆದಿಟ್ಟು, ನಿನ್ನೆ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು ವಿನಯ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.










