ಬಲತ್ಕಾರವಾಗಿ ಮತಾಂತರ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ : ಬಿ.ವೈ.ರಾಘವೇಂದ್ರ.

73
firstsuddi

ಶಿವಮೊಗ್ಗ : ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸ್ವತಂತ್ರವಾಗಿ ಅವರ ಧರ್ಮದಲ್ಲಿ ಬದುಕಲು ಅವಕಾಶವಿದೆ. ಆದರೆ ಬಲತ್ಕಾರವಾಗಿ ಮತಾಂತರ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿ ತರುವ ವಿಚಾರವಾಗಿ ಸಿಎಂ ಬೊಮ್ಮಾಯಿ ಅವರ ನಿರ್ಧಾರ ಸರಿಯಿದೆ. ಪದೇ ಪದೇ ಅಲ್ಲೊಂದು, ಇಲ್ಲೊಂದು ಮತಾಂತರ ಪ್ರಕರಣ ಕೇಳಿ ಬರುತ್ತಿದೆ. ಆ ದೃಷ್ಟಿಕೋನ ಇಟ್ಟುಕೊಂಡು ಮತಾಂತರ ಕಾಯ್ದೆಯಲ್ಲಿ ತಿದ್ದುಪಡಿ ತರಲು ಸರ್ಕಾರ ಯೋಚಿಸುತ್ತಿದೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಮಹತ್ವದ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಗೃಹಸಚಿವರು ಹೇಳಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಗೋಹತ್ಯೆಗೆ ಸಂಬಂಧಿಸಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆಗೂ ತಿದ್ದುಪಡಿಯ ಅಗತ್ಯವಿದೆ. ಗೋಹತ್ಯೆ ಪ್ರಕರಣ ದಾಖಲಾದರೂ ಆರೋಪಿಗಳು ಕೆಲವೇ ಗಂಟೆಯಲ್ಲಿ ಹೊರಬರುತ್ತಾರೆ. ಹೀಗಾಗಿ ಕಾಯ್ದೆ ಮತ್ತಷ್ಟು ಬಿಗಿಯಾದರೆ, ಕಾನೂನಿಗೂ ಇನ್ನಷ್ಟು ಗೌರವ ಹೆಚ್ಚುತ್ತದೆ ಎಂದರು.