ವಿಶ್ವದಲ್ಲಿ ಹೊಸ ರೂಪಾಂತರಿ ಅಟ್ಟಹಾಸ – ಓಮಿಕ್ರಾನ್‍ಗೆ ಮೊದಲ ಬಲಿ…

69
firstsuddi

ಲಂಡನ್ : ವಿಶ್ವದಾದ್ಯಂತ ಕೊರೊನಾ ರೂಪಾಂತರಿ ಓಮಿಕ್ರಾನ್ ರಣಕೇಕೆ ಹಾಕುತ್ತಿದ್ದು, ಇದರ ಬೆನ್ನಲ್ಲೇ ಬ್ರಿಟನ್ ನಲ್ಲಿ ಒಮಿಕ್ರಾನ್ ಸೋಂಕಿನಿಂದಾಗಿ ಓರ್ವ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೇ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಒಮಿಕ್ರಾನ್ ಸೋಂಕಿನಿಂದಾಗಿ ಓರ್ವ ವ್ಯಕ್ತಿ ಬಲಿಯಾಗಿರುವುದು ದುಃಖಕರ ಸಂಗತಿ. ಓಮಿಕ್ರಾನ್ ತಡೆಯಲು ದೇಶದಲ್ಲಿ ಕೋವಿಡ್ ಬೂಸ್ಟರ್ ಡೋಸ್ ಅಗತ್ಯವಿದೆ. ಹೀಗಾಗಿ ಇಂಗ್ಲೆಂಡ್ ನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಶಾಟ್ ಕಾರ್ಯಕ್ರಮವನ್ನು ಆರಂಭಿಸಲಾಗುತ್ತದೆ ಎಂದು ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.