ಬೆಂಗಳೂರು : ನಿನ್ನೆಯಿಂದ ಪ್ರೊ ಕಬಡ್ಡಿ 8ನೇ ಆವೃತ್ತಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ವಿರುದ್ಧ 30-46 ಅಂಕಗಳ ಅಂತರದಲ್ಲಿ ಸೋಲು ಕಂಡಿದೆ.
ಬುಲ್ಸ್ ತಂಡವು ಪಂದ್ಯದಲ್ಲಿ ಉತ್ತಮ ಆರಂಭ ಮಾಡಿತ್ತು. 4-1ರ ಮುನ್ನಡೆ ಸಾಧಿಸಿತ್ತು. ಬೆಂಗಳೂರು ಪರ ನಾಯಕ ಪವನ್ ಶೆರಾವತ್ ಅದ್ಭುತ ರೈಡಿಂಗ್ ನಡೆಸಿ 12 ಅಂಕಗಳಿಸಿದರು. ಆದರೆ,ಯು ಮುಂಬಾ ಪರ ಉತ್ತಮ ಆಟ ಪ್ರದರ್ಶನ ತೋರಿದ ರೈಡರ್ ಅಭಿಷೇಕ್ ಸಿಂಗ್ 16 ಅಂಕ ಗಳಿಸಿದರು. ಈ ಮೂಲಕ ಯು ಮುಂಬಾ ತಂಡವು ಜಯಭೇರಿ ಬಾರಿಸಿತು.