ಮತಾಂತರ ನಿಷೇಧ ಕಾಯ್ದೆಯಿಂದ ಕಾಂಗ್ರೆಸಿಗೇಕೆ ಹೊಟ್ಟೆ ಉರಿ –ಶೋಭಾ ಕರಂದ್ಲಾಜೆ.

79
firstsuddi

ಉಡುಪಿ : ಮತಾಂತರ ಕಾಯ್ದೆಯಿಂದ ಕಾಂಗ್ರೆಸ್ ಗೆ ಯಾಕೆ ಹೊಟ್ಟೆ ಉರಿ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಕ್ರಮ ಮತಾಂತರ ಸಮಾಜಕ್ಕೆ ಮಾರಕವಾಗಿದ್ದು, ಅನಾರೋಗ್ಯ, ಬಡತನ, ಪ್ರೀತಿಯನ್ನು ದುರುಪಯೋಗ ಮಾಡಿಕೊಂಡು ಮತಾಂತರಗೊಳಿಸುವ ವ್ಯವಸ್ಥಿತ ಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ. ಮತಾಂತರ ನಿಷೇಧ ಕಾಯ್ದೆ ರಾಜ್ಯದ ದೇಶದ ಜನರ ಅಪೇಕ್ಷೆಯಾಗಿದೆ. ಆದರೆ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ. ಬೇರೆ ಧರ್ಮದವರನ್ನು ಮತಕಾಗಿ ಓಲೈಕೆ ಮಾಡಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಂಡು ಕುರ್ಚಿ ಗಟ್ಟಿ ಮಾಡುವ ಕೆಲಸ ಮಾಡುತ್ತಿದೆ ಎಂದರು.

ಅಕ್ರಮ ಮತಾಂತರದಂತಹ ಕೆಟ್ಟ ವ್ಯವಸ್ಥೆಗಳು ಸಮಾಜದಲ್ಲಿ ಇರಬಾರದು. ಓಟ್ ಬ್ಯಾಂಕಿಗಾಗಿ ಕಾಂಗ್ರೆಸ್ ಈ ಕಾಯ್ದೆಯನ್ನು ವಿರೋಧಿಸುತ್ತಿದ್ದು ಅವರು ಅಲ್ಪಸಂಖ್ಯಾತರ ಓಟಿನಲ್ಲಿ ಗೆಲ್ಲುವ ಪ್ಲ್ಯಾನ್ ಮಾಡಿಕೊಂಡಿದೆ. ಹಾಗಿದ್ದರೆ ಕಾಂಗ್ರೆಸಿಗರೇ ನಿಮಗೆ ಬಹುಸಂಖ್ಯಾತರ ಓಟು ಬೇಡ್ವಾ, ಕೇವಲ ಅಲ್ಪಸಂಖ್ಯಾತ ರ ಓಟಲ್ಲಿ ಗೆದ್ದು ಬರ್ತೀರಾ? ಅವರವರು ಧರ್ಮದಲ್ಲಿ ಇದ್ದರೆ ನಿಮಗೆ ಏನು ಸಮಸ್ಯೆ? ಕಾಂಗ್ರೆಸ್ ನಾಯಕರ ಶುಭನುಡಿಗಳನ್ನು ಜನ ನೋಡುತ್ತಿದ್ದು, ಕಾಂಗ್ರೆಸ್ಸಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ತಿರುಗೇಟು ನೀಡಿದರು.