ಅಮೃತಸರದ ಸಯಾಮಿಗಳಿಗೆ ಸಿಕ್ತು ಸರ್ಕಾರಿ ಉದ್ಯೋಗ…

95
firstsuddi

ಪಂಜಾಬ್ : ಅಮೃತಸರದ ಸಯಾಮಿ ಅವಳಿಗಳಾದ ಸೋಹ್ನಾ ಮತ್ತು ಮೋಹ್ನಾ ಸರ್ಕಾರಿ ಉದ್ಯೋಗ ದಕ್ಕಿಸಿಕೊಂಡಿದ್ದಾರೆ. ಸಯಾಮಿ ಅವಳಿಗಳು ಸರ್ಕಾರಿ ಹುದ್ದೆ ಪಡೆದದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

ಪಿಂಗಲ್ವಾಡ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡಿರುವ ಈ ಸಯಾಮಿಗಳು, ಐಟಿಐ ಶಿಕ್ಷಣ ಪಡೆದಿದ್ದಾರೆ. ಸರ್ಕಾರಿ ಹುದ್ದೆಗೆ ಅರ್ಜಿ ಹಾಕಿ ಪವರ್ ಕಾರ್ಪೊರೇಷನ್ ಲಿಮಿಟೆಡ್ನಲ್ಲಿ ಮೇಲ್ವಿಚಾರಕ ಕೆಲಸವನ್ನು ತಮ್ಮದಾಗಿಸಿಕೊಂಡಿದ್ದಾರೆ. ಡಿಸೆಂಬರ್ 20ರಂದು ಸರ್ಕಾರಿ ಕೆಲಸಕ್ಕೆ ಅಧಿಕೃತವಾಗಿ ಸೇರಿದ್ದಾರೆ. ವಿಶೇಷ ಅಂದರೆ ಸೋಹ್ನಾಗೆ ಸರ್ಕಾರಿ ಉದ್ಯೋಗ ಸಿಕ್ಕಿದ್ದು, ಮೋಹ್ನಾ ಕೂಡ ಕೆಲಸಕ್ಕೆ ಹೋಗಬೇಕಿದೆ.

ನಮಗೆ ಕೆಲಸದ ಬಗ್ಗೆ ತುಂಬಾ ಸಂತೋಷವಾಗಿದೆ. ಅವಕಾಶಕ್ಕಾಗಿ ನಾವು ಪಂಜಾಬ್ ಸರ್ಕಾರ ಮತ್ತು ಪಿಂಗಲ್ವಾರಾ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಸೋಹ್ನಾ ಮತ್ತು ಮೊಹ್ನಾ ಹೇಳಿದ್ದಾರೆ.

ಈ ಅವಳಿಗಳು ಜುಲೈ 14, 2003ರಲ್ಲಿ ಅಮೃತಸರದಲ್ಲಿ ಜನಿಸಿದರು. ಎರಡು ಹೃದಯಗಳು, ಮೂತ್ರಪಿಂಡಗಳು ಮತ್ತು ಬೆನ್ನುಹುರಿಗಳನ್ನು ಹೊಂದಿರುವ ಈ ಸಹೋದರರು ಕರುಳು, ಮೂತ್ರಕೋಶ ಮತ್ತು ಕಾಲುಗಳನ್ನು ಹಂಚಿಕೊಂಡಿದ್ದಾರೆ. ಜನನದ ನಂತರ, ಸೋಹ್ನಾ ಮತ್ತು ಮೋಹ್ನಾ ಅವರನ್ನು ಅವರ ಪೋಷಕರು ಕೈಬಿಟ್ಟಿದ್ದು ದೆಹಲಿಯ ಅಖಿಲ ಭಾರತ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಆಶ್ರಯದಲ್ಲಿ ಬೆಳೆದಿದ್ದಾರೆ. ಪರಸ್ಪರ ದೇಹಗಳನ್ನು ಬೇರ್ಪಡಿಸುವುದರಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು ಎಂಬ ಕಾರಣಕ್ಕೆ ಇಬ್ಬರು ಒಟ್ಟಾಗಿಯೇ ಜೀವನ ನಡೆಸುತ್ತಿದ್ದಾರೆ.