ಲಂಡನ್ : ಆನ್‍ಲೈನ್ ಶಾಪಿಂಗ್ ನಲ್ಲಿ ಗ್ರಾಹಕರೊಬ್ಬರು ಐಫೋನ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಎರಡು ಚಾಕೊಲೇಟ್ ಗಳು ಬಂದಿದ್ದು, ಅದನ್ನು ನೋಡಿ ಗ್ರಾಹಕ ಫುಲ್ ಶಾಕ್ ಆಗಿದ್ದಾರೆ.
ಇಂಗ್ಲೆಂಡ್‍ನ ಲೀಡ್ಸ್‍ನ ಡೇನಿಯಲ್ ಕ್ಯಾರೊಲ್ ಎಂಬುವರು ಡಿಎಚ್ಎಲ್ ವೆಬ್ ಸೈಟ್ ಮೂಲಕ ಡಿಸೆಂಬರ್ 2 ರಂದು 1 ಲಕ್ಷ ರೂ. ಮೌಲ್ಯದ ಐಫೋನ್ 13 ಪ್ರೊ ಮ್ಯಾಕ್ಸ್ ಅನ್ನು ಬುಕ್ ಮಾಡಿದ್ದರು. ಆದರೆ ಅವರು ಬುಕ್ ಮಾಡಿ ಎರಡು ವಾರಗಳಾದರೂ ಬಂದಿರಲಿಲ್ಲ. ಬಳಿಕ ಡಿಸೆಂಬರ್ 17 ರಂದು ಬುಕ್ ಮಾಡಿದ್ದ ಬಾಕ್ಸ್ ಬಂದಿತು. ನಂತರ ಖುಷಿಯಿಂದ ಕವರ್ ಓಪನ್ ಮಾಡಿದ್ದಾರೆ. ಆದರೆ ಅದನ್ನು ತೆಗೆದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಪಾರ್ಸಲ್ ನಲ್ಲಿ ಎರಡು ಕ್ಯಾಡ್ಬರಿ ವೈಟ್ ಓರಿಯೊ ಚಾಕೊಲೇಟ್ ಬಂದಿತ್ತು. ಈ ಕುರಿತು ಅವರು ಗ್ರಾಹಕ ರಕ್ಷಣಾ ವೇದಿಕೆಗೆ ದೂರನ್ನು ನೀಡಿದ್ದು ತನಿಖೆ ಆರಂಭವಾಗಿದೆ.
ಈ ಕುರಿತು ಡೇನಿಯಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಐಪೋನ್ಗಾಗಿ 24-ಮೈಲಿ ಹೋಗಬೇಕಾಯಿತು. ಆದರೂ ಹೋಗಿ ನನ್ನ ಆರ್ಡರ್ ಅನ್ನು ತೆಗೆದುಕೊಂಡು ಮನೆಗೆ ಬಂದೆ. ಆ ಬಾಕ್ಸ್ ತುಂಬಾ ಹಗುರವಾಗಿತ್ತು. ಆಗ ನಾನು ಅದನ್ನು ತೆಗೆದು ನೋಡಿದಾಗ ಶಾಕ್ ಆಯ್ತು. ಅದರಲ್ಲಿ ನಾನು ಆರ್ಡರ್ ಮಾಡಿದ ಫೋನ್ ಬದಲಿಗೆ ರೋಲ್ ನಲ್ಲಿ ಸುತ್ತಿ ಇಟ್ಟಿದ್ದ ಚಾಕೊಲೇಟ್ ಇತ್ತು. ಅಲ್ಲದೆ ತಾನು 1 ಲಕ್ಷ ರೂಗಳನ್ನು ಪಾವತಿ ಮಾಡಿದ್ದೆ ಎಂದು ನೋವು ಹಂಚಿಕೊಂಡಿದ್ದಾರೆ.










