ಜಾರ್ಖಂಡ್ : ಜ.26 ರಿಂದ ಪೆಟ್ರೋಲ್ ದರ 25 ರೂ. ಇಳಿಕೆ…

108
firstsuddi

ರಾಂಚಿ : ಜಾರ್ಖಂಡ್ ನಲ್ಲಿ ಜನವರಿ 26ರಿಂದ ಪೆಟ್ರೋಲ್ ದರ ಲೀಟರ್ ಗೆ 25 ರೂ. ಇಳಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಮಂತ್ ಸೋರೇನ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಸೊರೆನ್ ನೇತೃತ್ವದ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಬಡ ವರ್ಗದ ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಸರ್ಕಾರ ಪೆಟ್ರೋಲ್ ಬೆಲೆ ಇಳಿಕೆಗೆ ನಿರ್ಧಾರ ಮಾಡಿದ್ದು, ಪ್ರತಿ ಲೀಟರ್ ಗೆ 25 ರೂ. ಇಳಿಕೆ ಮಾಡಲಾಗುತ್ತಿದೆ. ಈ ನಿಯಮ ದ್ವಿಚಕ್ರ ವಾಹನ ಹೊಂದಿರುವವರಿಗೆ ಮಾತ್ರ ಅನ್ವಯವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.