ಶಿವಕಾಶಿ ಕಾರ್ಖಾನೆಯಲ್ಲಿ ಪಟಾಕಿ ಸ್ಫೋಟ – ನಾಲ್ವರು ಸಾವು…

83
firstsuddi

ಚೆನ್ನೈ : ತಮಿಳುನಾಡಿನ ಶಿವಕಾಶಿಯ ಎಂ.ಪುದುಪಟ್ಟಿ ಗ್ರಾಮದ ವಡಿವೇಲ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟವಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ ಪಟಾಕಿ ತಯಾರಿಸುವಾಗ ಈ ದುರಂತ ಸಂಭವಿಸಿದೆ. ಕೊಠಡಿಯೊಂದರಲ್ಲಿ ಸ್ಫೋಟವುಂಟಾದ ಹೊತ್ತಲ್ಲಿ, ಕಾರ್ಖಾನೆಯಲ್ಲಿ 30ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಫೋಟದ ರಭಸಕ್ಕೆ ಫ್ಯಾಕ್ಟರಿಯ ಎರಡು ಕೋಣೆಗಳು ಸಂಪೂರ್ಣ ಧ್ವಂಸಗೊಂಡಿವೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಧ್ವಂಸಗೊಂಡ ಕಾರ್ಖಾನೆ ಬಳಿ ಅಗ್ನಿಶಾಮಕದಳದ ಸಿಬ್ಬಂದಿ, ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.