ಅಫ್ಘಾನಿಸ್ತಾನಕ್ಕೆ 5 ಲಕ್ಷ ಡೋಸ್ ಕೊರೊನಾ ಲಸಿಕೆ ರವಾನಿಸಿದ ಭಾರತ.

69
firstsuddi

ನವದೆಹಲಿ : ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ಸಂಪೂರ್ಣವಾಗಿ ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಜನರು ಇನ್ನಿಲ್ಲದಂತೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ಅವರ ನೆರವಿಗೆ ಧಾವಿಸಿರುವ ಭಾರತ ಸಹಾಯಹಸ್ತ ಚಾಚಿದೆ.

ಭಾರತವು ಇಂದು 5 ಲಕ್ಷ ಡೋಸ್ ಕೊವಿಡ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿದೆ. ಕಾಬೂಲ್ನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಲಸಿಕೆಗಳನ್ನು ಹಸ್ತಾಂತರಿಸಲಾಯಿತು. ಮುಂಬರುವ ವಾರಗಳಲ್ಲಿ ಮತ್ತೆ 5 ಲಕ್ಷ ಡೋಸ್ ಲಸಿಕೆಗಳನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದೆ.

ಅಫ್ಘಾನಿಸ್ತಾನಕ್ಕೆ ಈಗಾಗಲೇ 50 ಸಾವಿರ ಮೆಟ್ರಿಕ್ ಟನ್ ಗೋಧಿ ಸೇರಿದಂತೆ ಅಗತ್ಯ ಜೀವ ರಕ್ಷಕ ಔಷಧ ಒದಗಿಸಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಭಾರತ ವಿಶ್ವ ಆರೋಗ್ಯ ಸಂಸ್ಥೆ ಮೂಲಕ ಅಫ್ಘಾನಿಸ್ತಾನಕ್ಕೆ 1.6 ಟನ್ ವೈದ್ಯಕೀಯ ನೆರವು ನೀಡಿದ್ದು, ಇದೀಗ ಮಾನವೀಯತೆ ಆಧಾರದ ಮೇರೆಗೆ ಈ ಸಹಾಯ ಮಾಡುತ್ತಿದೆ.