ಗೆಳೆಯನ ಜೊತೆ ಸರಳವಾಗಿ ವಿವಾಹವಾದ ಶುಭಾ ಪೂಂಜಾ.

104
firstsuddi

ಸ್ಯಾಂಡಲ್‌ವುಡ್‌ ನ ನಟಿ, ಬಿಗ್ ಬಾಸ್ ಖ್ಯಾತಿಯ ಶುಭಾ ಪೂಂಜಾ ದೀರ್ಘಕಾಲದ ಗೆಳೆಯ ಸುಮಂತ್ ಜೊತೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಂಗಳೂರಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನಡೆದಿದೆ. ಆಪ್ತರು, ಸ್ನೇಹಿತರು ಮದುವೆಯಲ್ಲಿ ಭಾಗಿಯಾಗಿದ್ದಾರೆ. ಶುಭಾ ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ. ಎಂದು ಇನ್ ಸ್ಟಾಗ್ರಾಮ್ನ ಲ್ಲಿ ಬರೆದುಕೊಂಡಿದ್ದಾರೆ.

ಹಲವು ವರ್ಷಗಳಿಂದ ಸಮಾಜ ಸೇವಕ ಸುಮಂತ್ ಅವರನ್ನು ಪ್ರೀತಿಸುತ್ತಿದ್ದ ಶುಭಾ, 2021 ಡಿಸೆಂಬರ್ ಅಥವಾ 2022ರ ಜನವರಿ ಮೊದಲ ವಾರದಲ್ಲಿ ಮದುವೆ ಆಗುವುದಾಗಿ ಹೇಳಿಕೊಂಡಿದ್ದರು.