ನವದೆಹಲಿ : ದತ್ತು ಪಡೆದಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಅಸ್ಸಾಂ ಮೂಲದ ಪದ್ಮ ಪ್ರಶಸ್ತಿ ಪುರಸ್ಕೃತ ಉದ್ಧಬ್ ಭರಾಲಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಾಗಿದೆ.
ಬಾಲಕಿಯನ್ನು ಕೆಲವು ದಿನಗಳ ಹಿಂದೆ ಅವರು ದತ್ತು ಪಡೆದಿದ್ದರು. ತಾನೇ ದತ್ತು ಪಡೆದಿದ್ದ ಬಾಲಕಿಯ ಮೇಲೆ ಉದ್ಧಬ್ ಭರಾಲಿ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಡಿಸೆಂಬರ್ 17ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ (ಡಿಎಸ್ಎಲ್ಎ) ಮಾಹಿತಿ ಪಡೆದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ದೂರಿನ ಆಧಾರದ ಮೇಲೆ, ಅಸ್ಸಾಂ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರೆ ಎಫ್ ಐಆರ್ ದಾಖಲಾದ ತಕ್ಷಣ ಉದ್ಧಬ್ ಭಾರಾಲಿ ಅವರು ಬಂಧನಕ್ಕೆ ಮುಂಚಿತವಾಗಿ ಜಾಮೀನು ಕೋರಿ ಗೌಹಾಟಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿ ಅರುಣ್ ದೇವ್ ಚೌಧರಿ ಅವರ ರಜಾಕಾಲದ ಪೀಠವು ಅವರಿಗೆ ಕೆಲವು ಷರತ್ತುಗಳೊಂದಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಸದ್ಯ ಸಂತ್ರಸ್ತೆ ಪ್ರಸ್ತುತ ವಿಶೇಷ ಪೊಲೀಸ್ ರಕ್ಷಣೆಯಲ್ಲಿ ಮಕ್ಕಳ ಆರೈಕೆ ಕೇಂದ್ರದಲ್ಲಿದ್ದಾಳೆ.










