ಹೂಸು ಮಾರಿ ವಾರಕ್ಕೆ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದ ಸೆಲೆಬ್ರಿಟಿ ಇದೀಗ ಆಸ್ಪತ್ರೆಗೆ ದಾಖಲು…

90
firstsuddi

ಹೈದರಾಬಾದ್ : ಜಗತ್ತಿನಲ್ಲಿ ಎಂಥೆಂತದ್ದೋ ವಿಚಿತ್ರಗಳನ್ನು ನೋಡಿರುತ್ತೇವೆ. ಆದರೆ, ಇದು ಅದೆಲ್ಲಕ್ಕಿಂತಲೂ ಭಿನ್ನ. ಅಚ್ಚರಿಯಾದರೂ ಇದನ್ನು ನೀವು ನಂಬಲೇ ಬೇಕು. ಸೆಲೆಬ್ರಿಟಿಯೊಬ್ಬರು ಹೂಸು ಮಾರಾಟ ಮಾಡಿ ವಾರಕ್ಕೆ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದರು. ಆದರೆ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

31 ವರ್ಷದ ಕಿರುತೆರೆ ಸೆಲೆಬ್ರಿಟಿಯ ಹೆಸರು ಸ್ಟೆಫನಿ ಮ್ಯಾಟಿಯೊ. ಈಕೆ ಹೂಸು ಬಿಡುವ ಮೂಲಕವೇ ವಾರಕ್ಕೆ 37 ಲಕ್ಷ ರೂ. ಗಳಿಸುತ್ತಿದ್ದಳು. ಆದರೆ ಕಳೆದ ಕೆಲ ದಿನಗಳ ಹಿಂದೆ ಸ್ಟೆಫನಿ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿವೊಂದರ ಜೊತೆ ಮಾತನಾಡಿರುವ ಸೆಲೆಬ್ರಿಟಿ, ಪ್ರತಿದಿನ ಹೆಚ್ಚು ಗ್ಯಾಸ್ ಬಿಡುತ್ತಿದ್ದ ಕಾರಣ ಇದೀಗ ಆಸ್ಪತ್ರೆಗೆ ದಾಖಲಾಗಿದ್ದು, ಇದರಿಂದ ಆರೋಗ್ಯದ ಮೇಲೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಈ ಕೆಲಸಕ್ಕೆ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ. ತನಗೆ ಹೃದಯಾಘಾತವಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ಸೂಚನೆ ನೀಡಿದ್ದಾರೆಂದು ತಿಳಿಸಿದ್ದಾಳೆ.

ತನ್ನ ಮೇಲಿದ್ದ ಬೇಡಿಕೆ ಉಳಿಸಿಕೊಳ್ಳಲು ಸ್ಟೆಫನಿ ವಾರಕ್ಕೆ ಸುಮಾರು 50 ಜಾರ್ ಗಳಷ್ಟು ಹೂಸನ್ನು ಸಂಗ್ರಹಿಸಿದ್ದರು. ಅಲ್ಲದೆ ಹೆಚ್ಚು ಗ್ಯಾಸ್ ಗಾಗಿ ಒಂದು ದಿನದಲ್ಲಿ 3 ಪ್ರೋಟೀನ್ ಶೇಕ್ ಗಳು ಮತ್ತು ಕಪ್ಪು ಬೀನ್ ಸೂಪ್ನ ಬೃಹತ್ ಬೌಲ್ ಸೇವಿಸಿದ್ದಾರೆ.

ರಕ್ತ ಪರೀಕ್ಷೆ ಹಾಗೂ ಇಸಿಜಿ ನಡೆಸಿದಾಗ ಬೀನ್ಸ್, ಮೊಟ್ಟೆ ಹಾಗೂ ಬಾಳೆಹಣ್ಣಿನ ಪದಾರ್ಥ ಹೆಚ್ಚಾಗಿ ಸೇವನೆ ಮಾಡಿರುವುದರಿಂದ ಈ ತೊಂದರೆ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.