ನೋಯ್ಡಾ : ಮನೆಯ ಹೊರಗೆ ಆಟವಾಡುತ್ತಿದ್ದಾಗ ಅಕ್ಕ, ತಮ್ಮ ಇಬ್ಬರು ಚರಂಡಿಗೆ ಬಿದ್ದು ಸಾವಿಗೀಡಾಗಿದ್ದಾರೆ.
ರುಬೀನಾ (9) ಹತ್ತು ತಿಂಗಳ ಕಿರಿಯ ಸಹೋದರ ಸುಮಿತ್ ಕುಮಾರ್ ಮೃತರಾಗಿದ್ದಾರೆ. ಬಿಹಾರದ ಸಮಸ್ತಿಪುರದ ನಿವಾಸಿ ಶಂಭು ಕುಮಾರ್ ಅವರು ತಮ್ಮ ಪತ್ನಿ ಮತ್ತು ಐದು ಮಕ್ಕಳೊಂದಿಗೆ ಕೊಳಗೇರಿಯಲ್ಲಿ ವಾಸಿಸುತ್ತಿದ್ದಾರೆ. ನಿನ್ನೆ ಸಂಜೆ 4:30ಕ್ಕೆ ಹಿರಿಯ ಮಗಳು ರುಬೀನಾ (9) ಹತ್ತು ತಿಂಗಳ ಕಿರಿಯ ಸಹೋದರ ಸುಮಿತ್ ಕುಮಾರ್ ನ ಜೊತೆ ಮನೆ ಬಳಿ ಆಟವಾಡುತ್ತಿದ್ದಳು. ಈ ವೇಳೆ ಇಬ್ಬರೂ ಅನುಮಾನಾಸ್ಪದವಾಗಿ ಚರಂಡಿಗೆ ಬಿದ್ದಿದ್ದಾರೆ.
ಮಕ್ಕಳಿಬ್ಬರು ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಅವರನ್ನು ಹುಡುಕತೊಡಗಿದಾಗ ಸುಮಾರು ಅರ್ಧ ಗಂಟೆಯ ನಂತರ ರುಬೀನಾ ಮತ್ತು ಅವಳ ಸಹೋದರ ಚರಂಡಿಯಲ್ಲಿ ಕಂಡುಬಂದಿದ್ದಾರೆ. ಈ ಚರಂಡಿ ಸುಮಾರು 15 ಅಡಿ ಆಳವಿದ್ದು, ಇಬ್ಬರನ್ನೂ ಚರಂಡಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಇಬ್ಬರೂ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.










