ಲಂಡನ್​​​ನಲ್ಲಿರುವ ಮನೆಯನ್ನು ತೊರೆಯುವಂತೆ ವಿಜಯ್ ಮಲ್ಯಗೆ ಯುಕೆ ಕೋರ್ಟ್ ಆದೇಶ…

64
firstsuddi

ಲಂಡನ್(ಇಂಗ್ಲೆಂಡ್) : ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ಇಂಗ್ಲೆಂಡ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಯುಕೆ ಕೋರ್ಟ್ ಶಾಕ್ ನೀಡಿದ್ದು, ಐಷಾರಾಮಿ ನಿವಾಸ ತೊರೆಯುವಂತೆ ಆದೇಶ ನೀಡಿದೆ.

ಸ್ವಿಸ್ ಬ್ಯಾಂಕ್ ನೊಂದಿಗೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಜಯ್ ಮಲ್ಯಗೆ ತೀವ್ರ ಹಿನ್ನಡೆಯಾಗಿದ್ದು, ಲಂಡನ್ ನಲ್ಲಿರುವ ಐಷಾರಾಮಿ ಮನೆಯಲ್ಲಿ ವಾಸವಿರಲು ಅವಕಾಶವನ್ನು ಬ್ರಿಟನ್ ನ ಕೋರ್ಟ್ ನಿರಾಕರಿಸಿದೆ.

ಸ್ವಿಸ್ ಬ್ಯಾಂಕ್ ನೊಂದಿಗೆ ವಿಜಯ್ ಮಲ್ಯ ಸಾಲವನ್ನು ಪಡೆದಿದ್ದು, ಹಲವಾರು ಬಾರಿ ಸಾಲ ಮರುಪಾವತಿಗೆ ಸೂಚನೆ ನೀಡಲಾಗಿತ್ತು. ದಿನಾಂಕವನ್ನೂ ವಿಸ್ತರಣೆ ಮಾಡಲಾಗಿತ್ತು. ಸಾಲ ಮರುಪಾವತಿ ಮಾಡಲಾಗದ ಹಿನ್ನೆಲೆಯಲ್ಲಿ ಮಲ್ಯ ಕುಟುಂಬದವರಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಅವರು ತಕ್ಷಣ ತಮ್ಮ ಐಷಾರಾಮಿ ನಿವಾಸವನ್ನು ಖಾಲಿ ಮಾಡಬೇಕೆಂದು ಕೋರ್ಟ್ ಆದೇಶ ನೀಡಿದೆ.

ಕೋವಿಡ್ ನಿಂದಾಗಿ ಮನೆ ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳಿಕೊಂಡು ಬಂದಿದ್ದ ವಿಜಯ್ ಮಲ್ಯಗೆ ಈಗ ಐಷಾರಾಮಿ ಮನೆಯಿಂದ ಹೊರಬೀಳುವುದು ಅನಿವಾರ್ಯವಾಗಿದೆ.