ಕಾಣೆಯಾಗಿದ್ದ ಯುವಕನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದ ಚೀನಾ.

103
firstsuddi

ನವದೆಹಲಿ: ನಾಪತ್ತೆಯಾಗಿದ್ದ ಅರುಣಾಚಲ ಮೂಲದ ಯುವಕನನ್ನು ಚೀನಾದ ಸೇನೆ ಭಾರತೀಯ ಸೇನೆಗೆ ಹಸ್ತಾಂತರ ಮಾಡಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.

ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಜಿಡೋ ಗ್ರಾಮದ ಯುವಕ ಮಿರಾಮ್ ಟ್ಯಾರೋನ್ 2022ರ ಜನವರಿ 18 ರಂದು ಬಿಶಿಂಗ್ ಪ್ರದೇಶದ ಶಿಯುಂಗ್ ಲಾದಿಂದ ನಾಪತ್ತೆಯಾಗಿದ್ದ. ಟ್ಯಾರೋನ್ ನ ಸ್ನೇಹಿತ ಜಾನಿ ಯಾಯಿಂಗ್ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಆತನನ್ನು ಅಪಹರಿಸಿದ್ದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ.

ಭಾರತೀಯ ಸೇನೆ ಪಿಎಲ್ಎಯನ್ನು ಸಂಪರ್ಕಿಸಿ ಯುವಕನನ್ನು ಪತ್ತೆ ಹಚ್ಚಿ ಹಿಂದಿರುಗಿಸುವಂತೆ ಮನವಿ ಮಾಡಿತ್ತು. ಬಳಿಕ ಆತ ಪತ್ತೆಯಾಗಿರುವ ಬಗ್ಗೆ ಪಿಎಲ್ಎ ಭಾರತೀಯ ಸೇನೆಗೆ ಮಾಹಿತಿ ನೀಡಿತ್ತು. ಈಗ ಆ ಯುವಕನನ್ನು ಚೀನಾ ಸೇನೆ ಭಾರತೀಯ ಸೇನೆಯ ವಶಕ್ಕೆ ನೀಡಿದೆ ಎಂದು ತಿಳಿದು ಬಂದಿದೆ.