ಇಂದು ಸಮಾನತೆಯ ಪ್ರತಿಮೆ ಲೋಕಾರ್ಪಣೆ ಮಾಡಲಿರುವ ಮೋದಿ.

77
firstsuddi

ಹೈದರಾಬಾದ್ : 11ನೇ ಶತಮಾನದ ಭಕ್ತಿಪಂಥದ ಸಂತ ರಾಮಾನುಜಾಚಾರ್ಯರ ಸ್ಮರಣಾರ್ಥ 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ಯನ್ನು ಪ್ರಧಾನಿ ಮೋದಿ ಅವರು ಇಂದು ಅನಾವರಣಗೊಳಿಸಲಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ಸಂಜೆ 5 ಗಂಟೆಗೆ ನಾನು ಸಮಾನತೆಯ ಪ್ರತಿಮೆ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಸೇರುತ್ತೇನೆ. ಇದು ಶ್ರೀ ರಾಮಾನುಜಾಚಾರ್ಯರಿಗೆ ಸೂಕ್ತವಾದ ಗೌರವವಾಗಿದೆ. ರಾಮಾನುಜಾಚಾರ್ಯರ ಚಿಂತನೆ ಹಾಗೂ ಬೋಧನೆಗಳು ಎಲ್ಲರಿಗೂ ದಾರಿದೀಪ ಎಂದಿದ್ದಾರೆ.

ಹೈದರಾಬಾದ್ ನ ಮುಂಚಿತ್ತಾಲ್ ನಲ್ಲಿ ಪಂಚಲೋಹದ ರಾಮಾನುಜಾಚಾರ್ಯರ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ ಹಾಗೂ ಜಿಂಕ್ನಿಂದ ಈ ಪ್ರತಿಮೆ ನಿರ್ಮಿಸಲಾಗಿದೆ. ಈ ಮೂರ್ತಿಯು ಕುಳಿತ ಭಂಗಿಯಲ್ಲಿ ಇರುವ ವಿಶ್ವದ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿರಲಿದೆ. ಶ್ರೀರಾಮಾನುಜಾಚಾರ್ಯ ಸಹಸ್ರಾಬ್ದಿ ಸಮಾರೋಪ ಕಾರ್ಯಕ್ರಮವು ಒಟ್ಟು 12 ದಿನಗಳ ಕಾಲ ನಡೆಯಲಿದೆ. ಇದರ ಅಂಗವಾಗಿ ಇಂದು ಸಮಾನತೆಯ ಪ್ರತಿಮೆ ಅನಾವರಣಗೊಳ್ಳಲಿದೆ. ಈ ವೇಳೆ, ಪ್ರಧಾನಿ ಮೋದಿ ಹೈದರಾಬಾದ್ ನಲ್ಲಿ ಇತರ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಲಿದ್ದಾರೆ. ICRISATನ 50ನೇ ವಾರ್ಷಿಕೋತ್ಸವವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.