ಕೊರೊನಾದಿಂದ ಗಂಡ ಸಾವು – ವಿಧವೆಗೆ ಹೊಸ ಬಾಳು ಕೊಟ್ಟ ಪತಿಯ ಸಹೋದರ…

107
firstsuddi

ಮುಂಬೈ : ಕೊರೊನಾದಿಂದ ಪತಿ ಸಾವನ್ನಪ್ಪಿದ್ದರಿಂದ ವಿಧವೆಗೆ ಪತಿಯ ಸಹೋದರ ಹೊಸ ಬಾಳು ಕೊಟ್ಟಿರುವ ಅಪರೂಪದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಅಹಮದ್ ನಗರದ ಅಕೋಲೆ ತಾಲೂಕಿನ ಧೋಕ್ರಿಯ 31 ವರ್ಷದ ನೀಲೇಶ್ ಶೇಟೆ ಕೋವಿಡ್ ನಿಂದಾಗಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಾವನ್ನಪ್ಪಿದ್ದರು. ಈತನ ಸಾವಿನಿಂದಾಗಿ ಹೆಂಡತಿ, ಮಗಳು ಬೀದಿಗೆ ಬೀಳುತ್ತಾರೆ. 19 ತಿಂಗಳ ಮಗಳು ಹಾಗೂ ಪತ್ನಿ ಪೂನಂ ನೋಡಿಕೊಳ್ಳುವವರು ಯಾರೂ ಇಲ್ಲದಂತಾಗುತ್ತದೆ.

ಕೋವಿಡ್ ನಿಂದ ನೀಲೇಶ್ ಸಾವನ್ನಪ್ಪುತ್ತಿದ್ದಂತೆ ಆತನ ಸಹೋದರ ಸಮಾಧಾನ್ 23 ವರ್ಷದ ಪೂನಂ ಜೊತೆ ಮರು ವಿವಾಹ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸುತ್ತಾರೆ. ಗ್ರಾಮದ ಹಿರಿಯರು, ಎರಡು ಕುಟುಂಬದವರು ಮದುವೆಗೆ ಒಪ್ಪಿಗೆ ಸೂಚಿಸಿದ್ದು, ಕಳೆದ ಎರಡು ದಿನಗಳ ಹಿಂದೆ ಅಕೋಲಾದ ಖಂಡೋಬಾ ದೇವಸ್ಥಾನದಲ್ಲಿ ಸರಳ ಮದುವೆ ಸಮಾರಂಭ ನಡೆದಿದೆ. 26 ವರ್ಷದ ಸಮಾಧಾನ್ ಪೂನಂ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಆದರ್ಶ ಮದುವೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.