ರಾಜ್ಯಸಭೆಯಲ್ಲಿ ಲತಾ ಮಂಗೇಶ್ಕರ್ ಗೆ ನಮನ – ಕಲಾಪ 1 ಗಂಟೆ ಕಾಲ ಮುಂದೂಡಿಕೆ…

72
firstsuddi

ನವದೆಹಲಿ : ಇಹಲೋಕ ತ್ಯಜಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ರಾಜ್ಯಸಭೆ ಅಧಿವೇಶನದಲ್ಲಿ ಇಂದು ಮೌನಾಚರಣೆ ಮೂಲಕ ಸದಸ್ಯರು ನಮನ ಸಲ್ಲಿಸಿದರು. ಬಳಿಕ ರಾಜ್ಯಸಭೆ ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರು ಲತಾ ಮಂಗೇಶ್ಕರ್ ಅವರಿಗೆ ಗೌರವ ನೀಡಲು ಕಲಾಪವನ್ನು 1 ಗಂಟೆಯ ಕಾಲ ಮುಂದೂಡಿದರು.

ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿದಿದೆ. ಈಗಾಗಲೇ ದೇಶದಲ್ಲಿ ಎರಡು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದ್ದು, ಇಂದು ಬಾಂಬೆ ಹೈಕೋರ್ಟ್ ಮತ್ತು ಸೆಷೆನ್ಸ್ ಕೋರ್ಟ್ ಗಳು ರಜೆ ಘೋಷಿಸಿ ಗೌರವ ನಮನ ಸಲ್ಲಿಸಿವೆ.