ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ.

64
firstsuddi

ಲಕ್ನೋ : ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಗೆಲುವಿಗಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಲಕ್ನೋದ ಗೋಮತಿ ನಗರದಲ್ಲಿರುವ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಯುಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಸಮ್ಮುಖದಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.

ಬಿಜೆಪಿಯ ಪ್ರಣಾಳಿಕೆಯ ಪ್ರಮುಖ ಅಂಶಗಳು:
• ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಹಾಗೂ ವರ್ಕಿಂಗ್ ಮಹಿಳೆಯರಿಗೆ ಸ್ಕೂಟಿ ಮತ್ತು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್
• 5 ಸಾವಿರ ಕೋಟಿ ವೆಚ್ಚದಲ್ಲಿ ಕೃಷಿ ನೀರಾವರಿ ಯೋಜನೆ
• ಸರ್ದಾರ್ ಪಟೇಲ್ ಅಗ್ರಿ-ಇನ್ಫ್ರಾಸ್ಟ್ರಕ್ಚರ್ ಮಿಷನ್ – 25 ಸಾವಿರ ಕೋಟಿ ವೆಚ್ಚದಲ್ಲಿ ಆಲೂಗಡ್ಡೆ, ಟೊಮೆಟೊ, ಈರುಳ್ಳಿಯಂತಹ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಲೆ ನೀಡಲು 1 ಸಾವಿರ ಕೋಟಿ
• ಪ್ರತಿ ವಿಧವೆ ಮತ್ತು ನಿರ್ಗತಿಕ ಮಹಿಳೆಗೆ ತಿಂಗಳಿಗೆ 1500 ರೂಪಾಯಿ ಪಿಂಚಣಿ
• ರೈತರಿಗೆ ನೀರಾವರಿಗೆ ಉಚಿತ ವಿದ್ಯುತ್
• ಮಿಷನ್ ಪಿಂಕ್ ಟಾಯ್ಲೆಟ್ ಗೆ 1000 ಕೋಟಿ ರೂ
• ಕಬ್ಬು ರೈತರಿಗೆ 14 ದಿನಗಳಲ್ಲಿ ಪಾವತಿ, ವಿಳಂಬವಾದರೆ ಬಡ್ಡಿ 6 ಮೆಗಾ ಫುಡ್ ಪಾರ್ಕ್- ನಿಶಾದ್ರಾಜ್ ಬೋಟ್ ಸಬ್ಸಿಡಿ ಯೋಜನೆ