ತಮಿಳುನಾಡು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ – ಎನ್ಐಎ ತನಿಖೆಗೆ ಅಣ್ಣಾಮಲೈ ಆಗ್ರಹ…

74
firstsuddi

ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ಪ್ರಧಾನ ಕಚೇರಿಯ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಇಂದು ಬೆಳಗಿನ ಜಾವ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾನೆ. ತಮಿಳುನಾಡು ಬಿಜೆಪಿ ಕೇಂದ್ರ ಕಚೇರಿ ಕಮಲಾಲಯಂ ಮೇಲೆ ಈ ದಾಳಿ ನಡೆದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಾಂಬಲಂ ಠಾಣೆ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ 38 ವರ್ಷದ ವಿನೋದ್ ಎಂಬ ಓರ್ವ ಆರೋಪಿಯನ್ನು ಇದೀಗ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇನ್ನೂ ಈ ಘಟನೆ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಪ್ರಕರಣದ ಎನ್ ಐಎ ತನಿಖೆಗೆ ಆಗ್ರಹಿಸಿದ್ದಾರೆ. ಈ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆಯ ಹಿಂದೆಯೇ ದೊಡ್ಡ ಪಿತೂರಿಯೇ ಇದೆ. ಈ ಘಟನೆಗೆ ಎನ್ ಐಎ ಒಂದೇ ಪರಿಹಾರ. ಇದರಿಂದ ಸತ್ಯ ಮತ್ತು ಇದು ಯಾರ ಪಿತೂರಿ ಎಂಬುದು ಹೊರಬರುತ್ತದೆ ಎಂದು ಹೇಳಿದರು.