ಮೊಘಲ್ ಗಾರ್ಡನ್ ಫೆ.12ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ…

77
firstsuddi

ನವದೆಹಲಿ : ಪ್ರಸಿದ್ಧ ಮೊಘಲ್ ಗಾರ್ಡನ್ ಫೆಬ್ರವರಿ 12 ರಿಂದ ಮಾರ್ಚ್ 16 ರವರೆಗೆ(ನಿರ್ವಹಣಾ ದಿನಗಳಾದ ಸೋಮವಾರದಂದು ಹೊರತುಪಡಿಸಿ) ಪ್ರತಿದಿನ 10:00 ಗಂಟೆಯಿಂದ ಸಂಜೆ 5ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ರಾಷ್ಟ್ರಪತಿ ಭವನ ಹೇಳಿಕೆಯಲ್ಲಿ ತಿಳಿಸಿದೆ.

ಮುಂಗಡ ಆನ್ ಲೈನ್ ಬುಕಿಂಗ್ ಮೂಲಕ ಮಾತ್ರ ಪ್ರವಾಸಿಗರಿಗೆ ಉದ್ಯಾನವನವನ್ನು ನೋಡಲು ಅವಕಾಶ ನೀಡಲಾಗಿದೆ. https://rashtrapatisachivalaya.gov.in ಮೂಲಕ ಗಾರ್ಡನ್ ವೀಕ್ಷಣೆಗೆ ಬುಕ್ಕಿಂಗ್ ಮಾಡಬಹುದು. ಈ ವರ್ಷದ ‘ಉದ್ಯಾನೋತ್ಸವ’ದಲ್ಲಿ ಬಿಳಿ, ಕಿತ್ತಳೆ, ಹಳದಿ ಮತ್ತು ಕೆಂಪು ಬಣ್ಣದ ಹೂವುಗಳು ಸಾರ್ವಜನಿಕರನ್ನು ಆಕರ್ಷಿಸಲಿವೆ. ಭೇಟಿ ವೇಳೆ ಕೊರೊನಾ ನಿಯಮ ಪಾಲನೆ ಕಡ್ಡಾಯವಾಗಿದೆ.