ಬೆಂಗಳೂರಿಗೂ ಕಾಲಿಟ್ಟ ಹಿಜಾಬ್ ಫೈಟ್ – ಹಿಜಾಬ್ ವಿಚಾರವಾಗಿ ಮಕ್ಕಳಿಗೆ ಶಿಕ್ಷಕರಿಂದ ಕಿರುಕುಳ ಆರೋಪ…

62
firstsuddi

ಬೆಂಗಳೂರು : ಹಿಜಾಬ್ ವಿವಾದ ಇದೀಗ ನಗರಕ್ಕೂ ಕಾಲಿಟ್ಟಿದೆ. ಹಿಜಾಬ್ ಫೈಟ್ ನಿಂದಾಗಿ ನಗರದ ಚಂದ್ರಲೇಔಟ್ ನ ವಿದ್ಯಾಸಾಗರ್ ಶಾಲೆಯಲ್ಲಿ ಸಂಘರ್ಷ ಏರ್ಪಟ್ಟಿದೆ. 7ನೇ ತರಗತಿ ಮಕ್ಕಳಿಗೆ ಶಿಕ್ಷಕರಿಂದ ಹಿಜಾಬ್ ವಿಚಾರವಾಗಿ ಕಿರುಕುಳ ನೀಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಚಂದ್ರಾಲೇಔಟ್ ವಿದ್ಯಾ ಸಾಗರ್ ಕಾಲೇಜು ಮುಂದೆ ಪೋಷಕರು ಜಮಾಯಿಸಿದ್ದರು. ಈ ವೇಳೆ ಶಾಲೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ನಡುವೆ ಮತಿನ ಚಕಮಕಿ ನಡೆದಿದೆ. ಶಿಕ್ಷಕಿಯೊಬ್ಬರು ತರಗತಿಯ ಬೋರ್ಡ್ ನಲ್ಲಿ ಹಿಜಾಬ್ ಮತ್ತು ಮುಸ್ಲಿಂ ಜನಾಂಗಕ್ಕೆ ಸಂಬಂಧಿಸಿದಂತೆ ಅವಾಚ್ಯ ಶಬ್ದಗಳನ್ನು ಬರೆದಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚಂದ್ರಾ ಲೇ ಔಟ್ ನ ವಿದ್ಯಾಸಾಗರ್ ಶಾಲೆಯಲ್ಲಿ ಗೊಂದಲದ ಉದ್ವಿಗ್ನ ವಾತಾವರಣ ಉಂಟಾಗಿದ್ದು, ನಂತರ ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಈ ಘಟನೆ ಕುರಿತಂತೆ ಬೆಂಗಳೂರು ದಕ್ಷಿಣ ಶಿಕ್ಷಣ ಅಧಿಕಾರಿ ಭೈಲಾಂಜನಪ್ಪ ಅವರು, ಹಿಜಬ್ ಹಾಕಿಕೊಂಡು ಬಂದಿರುವುದಕ್ಕೆ ಈ ವಿವಾದ ಆಗಿಲ್ಲ. ಪೋಷಕರು ಆರೋಪಿಸಿದ ಶಿಕ್ಷಕಿ ಜತೆ ಚರ್ಚೆ ಮಾಡಿದ್ದೇನೆ. ಕೇವಲ ಪಾಠವನ್ನು ಮಾತ್ರ ಮಾಡಿದ್ದೇನೆ. ಯಾವುದೇ ಕೋರ್ಟ್ ವಿಚಾರ ಚರ್ಚಿಸಿಲ್ಲವೆಂದು ತಿಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ವಿದ್ಯಾಸಾಗರ್ ಶಾಲೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಶಿಕ್ಷಕಿ ಶಶಿಕಲಾ ಅವರನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದೆ. ಇನ್ನೂ ಬೆಂಗಳೂರಿನ ವಿದ್ಯಾಸಾಗರ ಶಾಲೆಯಲ್ಲಿ ವಿವಾದ ವಿಚಾರ ಶಿಕ್ಷಕಿ ವಿರುದ್ಧ ಪೋಷಕರು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.