ಬೆಂಗಳೂರು : ವಿಧಾನಸೌಧದಲ್ಲಿ ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸುವ ವಿಚಾರವಾಗಿ ಮಾತನಾಡುತ್ತಿದ್ದಾಗ ಮಾಧ್ಯಮಗಳ ಮುಂದೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾವುಕರಾದರು.
ನಾವು ಸೀಮಿತವಾದ ಚೌಕಟ್ಟಿನಲ್ಲಿ ನಮ್ಮನ್ನು ಕಟ್ಟಿ ಹಾಕೊಂಡಿದ್ದೇವೆ. ಸೃಷ್ಟಿಯ ಸತ್ಯ ಅರಿತುಕೊಳ್ಳಬೇಕಾಗಿದೆ. ಬ್ರಿಟಿಷ್ ಶಿಕ್ಷಣ ಪದ್ದತಿಯಿಂದಾಗಿ ಜೀವನದ ಕಲ್ಪನೆಗಳು ಇಲ್ಲದಂತಾಗಿವೆ. ನಮ್ಮಲ್ಲಿ ಸಾರ್ಥಕತೆಯ ಭಾವವೇ ಇಲ್ಲದಂತಾಗಿದೆ. ನಂಬಿಕೆಗಳು ಹಾಗೂ ವಿಶ್ವಾಸ ಬರದೇ ಹೋದಲ್ಲಿ ವ್ಯವಸ್ಥೆ ಉತ್ತಮ ರೀತಿ ಮುನ್ನಡೆಯಲು ಸಾಧ್ಯವಿಲ್ಲ.ಯಾವ ವ್ಯವಸ್ಥೆಯಲ್ಲಿ ನಾವು ಇದ್ದೇವೋ, ಅದನ್ನು ಸರಿಯಾಗಿ ನಡೆಸಬೇಕಾದಲ್ಲಿ ಜ್ಞಾನದ ವಿಸ್ತಾರ ಆಗಬೇಕು. ಆ ಪ್ರಯತ್ನ ನಡೆಯಬೇಕು ಎಂದು ಭಾವುಕರಾಗಿ ಕಣ್ಣೀರು ಹಾಕಿದರು. ನಂತರ ಧನ್ಯವಾದ ಎಂದು ಅಲ್ಲಿಂದ ಹೋದರು.










