ಇಸ್ರೋ ಉಪಗ್ರಹ ಉಡ್ಡಾಯನ ಯಶಸ್ವಿ…

75
firstsuddi

ಶ್ರೀಹರಿಕೋಟ : ಭಾರತೀಯ ಬಾಹ್ಯಾಕಾಶ ಹಾಗೂ ಸಂಶೋಧನಾ ಸಂಸ್ಥೆ(ಇಸ್ರೋ) ಈ ವರ್ಷದ ಮೊದಲ ಭೂ ವೀಕ್ಷಣಾ ಉಪಗ್ರಹ EOS-04 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು.

ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 5.59ಕ್ಕೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್ ಎಲ್ ವಿ) ರಾಕೆಟ್ ಮೂಲಕ ಉಪಗ್ರಹವನ್ನು ಹಾರಿಸಲಾಗಿದೆ. EOS-04 ಜೊತೆ INSPIREsat-1 ಮತ್ತು INS-2TD ಎಂಬ ಸಣ್ಣ ಉಪಗ್ರಹಗಳನ್ನು ಕೂಡ ಪಿಎಸ್ ಎಲ್ ವಿ-ಸಿ52 ಕಕ್ಷೆಗೆ ಸಾಗಿಸಿತು.

EOS-04 ಉಪಗ್ರಹ ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್ ನಂತಹ ಅಪ್ಲಿಕೇಷನ್ ಗಳಿಗಾಗಿ ಕೆಲಸ ಮಾಡಲಿದೆ. ಎಂಥಹದ್ದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕೂಡಾ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ರವಾನಿಸುವಂತೆ ವಿನ್ಯಾಸ ಮಾಡಲಾಗಿದೆ.